ಐನಾಕ್ಸ್, ಪಿವಿಆರ್ ನಲ್ಲಿ ಇಂದಿನಿಂದ ಕನ್ನಡದ ಸೂಪರ್ ಹಿಟ್ ಸಿನಿಮಾಗಳು ರಿ ರಿಲೀಸ್

ಶುಕ್ರವಾರ, 19 ಮೇ 2023 (07:20 IST)
ಬೆಂಗಳೂರು: ಪ್ರೇಕ್ಷಕರನ್ನು ಸೆಳೆಯುವ ದೃಷ್ಟಿಯಿಂದ ಇಂದಿನಿಂದ ಪಿವಿಆರ್ ಮತ್ತು ಐನಾಕ್ಸ್ ನಲ್ಲಿ ಒಂದು ವಾರ ಕಾಲ ರಿಯಾಯಿತಿ ದರದಲ್ಲಿ ಕನ್ನಡದ ಸೂಪರ್ ಹಿಟ್ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ.

ಹಿಂದೊಮ್ಮೆ ಪಿವಿಆರ್ ಟಿಕೆಟ್ ದರ 100 ರೂ. ನಿಗದಿ ಮಾಡಿದ್ದಾಗ ಭರ್ಜರಿ ಪ್ರತಿಕ್ರಿಯೆ ಬಂದಿತ್ತು. ಇದೇ ಸಕ್ಸಸ್ ನ ಹಿನ್ನಲೆಯಲ್ಲಿ ಮತ್ತೊಮ್ಮೆ ಒಂದು ವಾರ ಕಾಲ ಈ ಆಫರ್ ವಿಸ್ತರಿಸಲು ಪಿವಿಆರ್, ಐನಾಕ್ಸ್ ನಂತಹ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ತೀರ್ಮಾನ ಮಾಡಿವೆ.

ಅದರಂತೆ ಇಂದಿನಿಂದ ಮೇ 25 ರವರೆಗೆ ಪಿವಿಆರ್, ಐನಾಕ್ಸ್ ನಲ್ಲಿ ಕನ್ನಡದ ಬ್ಲಾಕ್ ಬ್ಲಸ್ಟರ್ ಸಿನಿಮಾಗಳಾದ ರಾಜಕುಮಾರ್, ಗರುಡಗಮನ ವೃಷಭ ವಾಹನ, ಕೆಜಿಎಫ್ 1, ಮಫ್ತಿ, ಮಾಸ್ಟರ್ ಪೀಸ್, ಗಂಧದ ಗುಡಿಯನ್ನು ಕೇವಲ 99 ರೂ.ಗಳಲ್ಲಿ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ