ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರ ವಿಶ್

ಶುಕ್ರವಾರ, 20 ಆಗಸ್ಟ್ 2021 (08:56 IST)
ಬೆಂಗಳೂರು: ಇಂದು ವರಮಹಾಲಕ್ಷ್ಮಿ ಆಚರಿಸಲಾಗುತ್ತಿದ್ದು, ಸ್ಯಾಂಡಲ್ ವುಡ್ ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಹಬ್ಬಕ್ಕೆ ಶುಭ ಕೋರಿದ್ದಾರೆ.


ನಟ ಪುನೀತ್ ರಾಜ್ ಕುಮಾರ್ ವಿಶೇಷ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿ ಸಮಯ ಮತ್ತು ಆರೋಗ್ಯವೇ ಲಕ್ಷ್ಮಿ ಎಂದು ಶುಭ ಕೋರಿದ್ದಾರೆ. ಪ್ರಿಯಾಂಕ ಉಪೇಂದ್ರ, ರಚಿತಾ ರಾಮ್ ಸೇರಿದಂತೆ ಅನೇಕ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪೋಸ್ಟ್ ಗಳ ಮೂಲಕ ಶುಭಾಶಯ ಕೋರಿದ್ದಾರೆ.

ಈ ಬಾರಿ ಕೊರೋನಾ ಇರುವುದರಿಂದ ಭರ್ಜರಿ ಆಚರಣೆಗೆ ಬ್ರೇಕ್ ಬಿದ್ದಿದೆ. ಸ್ಯಾಂಡಲ್ ವುಡ್ ನಲ್ಲೂ ಕೂಡಾ ಹೊಸ ಸಿನಿಮಾಗಳು ಸೆಟ್ಟೇರುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ