ಬೆಂಗಳೂರು: ಚಾರ್ಲಿ 777 ಮುಗಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಸಪ್ತಸಾಗರದಾಚೆಯೆಲ್ಲೊ ಸಿನಿಮಾ ಶೂಟಿಂಗ್ ಗೆ ಹಾಜರಾಗಿದ್ದಾರೆ.
ಹೇಮಂತ್ ರಾವ್ ನಿರ್ದೇಶನ ಸಪ್ತಸಾಗರದಾಚೆಯೆಲ್ಲೊ ಸಿನಿಮಾ ಬೆಂಗಳೂರಿನಲ್ಲಿ ವಿಶೇಷ ಸೆಟ್ ನಲ್ಲಿ ಶೂಟಿಂಗ್ ಆರಂಭಿಸಿದೆ. ಮುಂದಿನ 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.
ರಕ್ಷಿತ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ. ಲಾಕ್ ಡೌನ್ ಗೂ ಮೊದಲೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆದಿತ್ತು. ಕೊರೋನಾದಿಂದಾಗಿ ಶೂಟಿಂಗ್ ಇಷ್ಟು ದಿನ ಮುಂದೂಡಿಕೆಯಾಗಿದೆ.