ನಟಿ ಸಂಜನಾ ಗಲ್ರಾನಿಗೂ ಕೊರೋನಾ ಸೋಂಕು

ಮಂಗಳವಾರ, 20 ಏಪ್ರಿಲ್ 2021 (10:08 IST)
ಬೆಂಗಳೂರು: ಇತ್ತೀಚೆಗಷ್ಟೇ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ನಟಿ ಸಂಜನಾ ಗಲ್ರಾನಿಗೂ ಕೊರೋನಾ ಸೋಂಕು ದೃಢಪಟ್ಟಿದೆ.


ಸಾಮಾಜಿಕ ಜಾಲತಾಣದಲ್ಲಿ ತಮಗೆ ಕೊರೋನಾ ಬಂದ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ‘ನಮ್ಮ ಕುಟುಂಬದಲ್ಲಿ ವೈದ್ಯರೊಬ್ಬರಿದ್ದು, ಅವರು ಸಮಾಜಕ್ಕೆ ಸೇವೆ ಮಾಡಲೇಕಾಗುತ್ತದೆ. ಹೀಗಾಗಿ ನಮಗೂ ಕೊರೋನಾ ಬಂದಿದೆ. ಆದರೆ ಭಯವಿಲ್ಲ. ಟ್ಯಾಬ್ಲೆಟ್ ತಗೊಂಡಿದ್ದೇನೆ. ಇಮ್ಯುನಿಟಿ ಬೆಳೆಸಿಕೊಳ್ಳಬೇಕು ಅಷ್ಟೇ’ ಎಂದಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಸಂಜನಾ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈಗ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸದ್ಯಕ್ಕೆ ಅವರು ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ