ಮತ್ತೆ ಕೆಜಿಎಫ್ ಸೆಟ್ ಗೆ ಸಂಜಯ್ ದತ್: ಅಧೀರನ ಶೂಟಿಂಗ್ ಶುರು ಯಾವಾಗ ಗೊತ್ತಾ?

ಗುರುವಾರ, 19 ನವೆಂಬರ್ 2020 (11:29 IST)
ಬೆಂಗಳೂರು: ಬಾಲಿವುಡ್ ನಟ ಸಂಜಯ್ ದತ್ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಇದೀಗ ಮತ್ತೆ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.


ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದಲ್ಲಿ ಸಂಜಯ್ ದತ್ ಅಧೀರನಾಗಿ ಪಾತ್ರ ಮಾಡುತ್ತಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ಸಂಜಯ್ ಭಾಗದ ಚಿತ್ರೀಕರಣ ಬಾಕಿಯಿದೆ. ಈ ಭಾಗವನ್ನು ಕೆಜಿಎಫ್ 2 ತಂಡ ಚಿತ್ರೀಕರಿಸಲು ಸಜ್ಜಾಗಿದೆ. ಮೂಲಗಳ ಪ್ರಕಾರ ಡಿಸೆಂಬರ್ ನಿಂದ ಸಂಜಯ್ ದತ್ ಕೆಜಿಎಫ್ 2 ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಅದಾದ ಬಳಿಕ ಶೂಟಿಂಗ್ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ