ಬೈಕ್ ರೈಡಿಂಗ್ ಆಯ್ತು, ಸ್ನೇಹಿತರ ಜತೆ ದರ್ಶನ್ ಈಗ ಕ್ರಿಕೆಟ್ ಆಡುವ ವಿಡಿಯೋ ವೈರಲ್

ಗುರುವಾರ, 19 ನವೆಂಬರ್ 2020 (10:21 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸ್ನೇಹಿತರ ಜತೆ ಈಗ ಜಾಲಿ ಮೂಡ್ ನಲ್ಲಿದ್ದಾರೆ. ದರ್ಶನ್ ಮತ್ತು ಸ್ನೇಹಿತರ ಗ್ಯಾಂಗ್ ಕ್ರಿಕೆಟ್ ಆಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
ಮೊನ್ನೆಯಷ್ಟೇ ದರ್ಶನ್ ತಮ್ಮ ಸ್ನೇಹಿತರಾದ ಉಮಾಪತಿ ಗೌಡ, ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್, ಪನ್ನಗಾಭರಣ ಮತ್ತಿತರರ ಜತೆ ಬೈಕ್ ರೈಡಿಂಗ್ ಮಾಡಿ ಸುದ್ದಿಯಾಗಿದ್ದರು. ಇದೀಗ ಇದೇ ಗೆಳೆಯರ ಜತೆ ಕ್ರಿಕೆಟ್ ಆಡುವ ವಿಡಿಯೋ ವೈರಲ್ ಆಗಿದೆ. ಈ ಮೂಲಕ ತಮಗೆ ಸಿಕ್ಕ ಬಿಡುವಿನ ವೇಳೆಯನ್ನು ಸ್ನೇಹಿತರ ಜತೆ ಖುಷಿಯಾಗಿಯೇ ಕಳೆಯುತ್ತಿದ್ದಾರೆ ದರ್ಶನ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ