ಕಿಚ್ಚ ಸುದೀಪ್ ಗೆ ಹೊಸ ಬಿರುದು ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

ಗುರುವಾರ, 18 ಜುಲೈ 2019 (10:21 IST)
ಬೆಂಗಳೂರು: ಬಾದ್ ಶಹಾ ಕಿಚ್ಚ ಸುದೀಪ್ ಗೆ ಈಗಾಗಲೇ ಅಭಿಮಾನಿಗಳು ಪ್ರೀತಿಯಿಂದ ಹಲವು ಹೆಸರು ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿ, ಕಿಚ್ಚ, ಬಾದ್ ಶಹಾ ಅಂತೆಲ್ಲಾ ಏನೇನೋ ನಾಮಾವಳಿ ನೀಡಿದ್ದಾರೆ.


ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಿಚ್ಚ ಸುದೀಪ್ ಗೆ ಹೊಸ ಟೈಟಲ್ ಕೊಟ್ಟಿದ್ದು, ‘ಪೈಲ್ವಾನ್ ಆಫ್ ರೊಮ್ಯಾನ್ಸ್’ ಎಂದು ಕರೆದಿದ್ದಾರೆ.

ಪೈಲ್ವಾನ್ ಸಿನಿಮಾದ ಕಣ್ಮಣಿಯೇ ಹಾಡು ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಆ ಹಾಡಿನಲ್ಲಿ ಕಿಚ್ಚನ ರೊಮ್ಯಾಂಟಿಕ್ ಮೂಡ್ ನೋಡಿ ಸಂತೋಷ್ ಈ ರೀತಿ ಬಿರುದು ನೀಡಿದ್ದಾರೆ. ಕಿಚ್ಚ ಕೂಡಾ ಈ ಬಿರುದನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ