ಸಾರ್ವಜನಿಕರಿಗೆ ಸುವರ್ಣಾವಕಾಶ: ಇದು ಪವರ್ ಸ್ಟಾರ್ ಮೆಚ್ಚಿಕೊಂಡಿರುವ ಚಿತ್ರ!

ಮಂಗಳವಾರ, 17 ಡಿಸೆಂಬರ್ 2019 (18:24 IST)
ಕೆಲ ಸಿನಿಮಾಗಳು ಬಿಡುಗಡೆಗೂ ಮುನ್ನವೇ ತಮ್ಮ ಗೆಲುವನ್ನು ಖಚಿತಪಡಿಸಿಕೊಂಡು ಬಿಟ್ಟಿರುತ್ತವೆ. ಟ್ರೇಲರ್ ಮತ್ತು ಹಾಡುಗಳಂಥಾ ದಾರಿಯಲ್ಲಿ ಪರಿಣಾಮಕಾರಿಯಾಗಿಯೇ ಪ್ರೇಕ್ಷಕರನ್ನು ತಲುಪಿಕೊಳ್ಳುವ ಮೂಲಕ ಹೆಜ್ಜೆ ಹೆಜ್ಜೆಗೂ ಸೆನ್ಸೇಷನ್ ಸೃಷ್ಟಿಸುತ್ತಾ ಸಾಗಿ ಬರುವ ಇಂಥಾ ಚಿತ್ರಗಳು ಬಿಡುಗಡೆಯ ಹೊಸ್ತಿಲಲ್ಲಿಯೇ ಭಾರೀ ಗೆಲುವಿನ ಮುನ್ಸೂಚನೆ ನೀಡಲಾರಂಭಿಸುತ್ತವೆ.

ಈ ವಾರ ಬಿಡುಗಡೆಯಾಗುತ್ತಿರುವ ರಿಷಿ ಅಭಿನಯದ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಕೂಡಾ ಖಂಡಿತವಾಗಿಯೂ ಆ ಸಾಲಿಗೆ ಸೇರ್ಪಡೆಯಾಗುತ್ತದೆ. ವಿಶೇಷವೆಂದರೆ ಈ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಮೆಚ್ಚುಗೆಗೂ ಪಾತ್ರವಾಗಿದೆ. ಆ ಪ್ರೀತಿಯಿಂದಲೇ ಅವರು ಈ ಚಿತ್ರಕ್ಕಾಗಿ ಒಂದು ಹಾಡನ್ನೂ ಹಾಡಿದ್ದಾರೆ.
 
ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಆಗಮಿಸಿರುವ ರಿಷಿಯದ್ದು ಎಲ್ಲರಿಗೂ ಇಷ್ಟವಾಗುವಂಥಾ ನಟನೆ. ಆರಂಭದಿಂದಲೂ ಪುನೀತ್ ರಾಜ್ ಕುಮಾರ್ ಕೂಡಾ ರಿಷಿಯನ್ನು ಮೆಚ್ಚಿಕೊಂಡಿದ್ದರು. ಆ ಪ್ರೀತಿಯಿಂದಲೇ ಅವರು ಪಿಆರ್ಕೆ ಬ್ಯಾನರಿನಡಿಯಲ್ಲಿಯೇ ರಿಷಿ ಅಭಿನಯದ ಕವಲುದಾರಿ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇದೀಗ ರಿಷಿ ನಟಿಸಿರೋ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರಕ್ಕಾಗಿ ಅವರೊಂದು ಹಾಡು ಹಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ. ಈ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯಲ್ಲಿಯೇ ಅನೂಪ್ ರಾಮಸ್ವಾಮಿ ಕೂಡಾ ಭರವಸೆ ತುಂಬಿಕೊಂಡಿದ್ದಾರೆ.
 
ಕನ್ನಡ ಚಿತ್ರರಂಗದ ಪಾಲಿಗಿದು ಹೊಸ ಅಲೆಯ ಸಿನಿಮಾಗಳ ಜಮಾನ. ಹೊಸಬರ ತಂಡಗಳು ಹೊಸತನ ಕಥೆಗಳೊಂದಿಗೆ ಬರುತ್ತಿರೋದರಿಂದ ಇಂತಾ ಸಿನಿಮಾಗಳತ್ತ ಪ್ರೇಪಕ್ಷಕರೂ ಕೂಡಾ ಚಿತ್ತ ಹರಿಸುತ್ತಿದ್ದಾರೆ. ಈ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಂತಿರೋ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾಥ್ ಕೊಟ್ಟಿದ್ದಾರೆ. ಇದಕ್ಕಾಗಿ ಪುನೀತ್ ಒಂದು ಹಾಡನ್ನು ಹಾಡಿದ್ದಾರೆ. ಅದರ ವೀಡಿಯೋ ಸಾಂಗ್ ಒಂದು ಬಿಡುಗಡೆಯಾಗಿ ಇದೀಗ ಸಖತ್ ವೈರಲ್ ಆಗಿ ಬಿಟ್ಟಿದೆ. ಈ ಹಾಡು ಯೂಟ್ಯೂಬ್ನಲ್ಲಿಯೂ ವ್ಯಾಪಕ ವೀಕ್ಷಣೆ ಪಡೆದುಕೊಂಡಿದೆ. ಒಟ್ಟಾರೆಯಾಗಿ ಈ ಸಿನಿಮಾ ಬಗ್ಗೆ ಹುಟ್ಟಿಕೊಂಡಿರೋ ಅಷ್ಟೂ ನಿರೀಕ್ಷೆಗಳಲ್ಲಿ ಪುನೀತ್ ಕಂಠದಲ್ಲಿ ಮೂಡಿ ಬಂದಿರುವ ಹಾಡಿನದ್ದೂ ಸಿಂಹ ಪಾಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ