ದಿನಕ್ಕೆ 100 ಸಿಗರೇಟ್ ಸೇದುತ್ತಿದ್ದ ಶಾರುಖ್ ಸಿಗರೇಟು ಬಿಟ್ಟಿದ್ದು ಹೇಗೆ

Sampriya

ಸೋಮವಾರ, 4 ನವೆಂಬರ್ 2024 (17:46 IST)
Photo Courtesy X
ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ನವೆಂಬರ್ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಅವರು ಅಭಿಮಾನಿಗಳ ಬಳಿ ಗುಡ್‌ನ್ಯೂಸ್‌ವೊಂದನ್ನು ಹಂಚಿಕೊಂಡರು.

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಾರುಖ್‌,  ಗುಡ್‌ನ್ಯೂಸ್‌ ಇದೆ. ಇನ್ಮುಂದೆ ನಾನು ಸಿಗರೇಟ್ ಸೇದುವುದಿಲ್ಲ ಬಾಯ್ಸ್‌ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಹಿಂದೆ ತನ್ನ ಜೀವನ ಶೈಲಿ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡುವಾಗದ, ನನಗೆ ದಿನಕ್ಕೆ 100 ಸಿಗರೇಟ್ ಬೇಕು ಎಂದು ಹೇಳುವ ಮೂಲಕ ಸಿಗರೇಟ್‌ಗೆ ದಾಸನಾಗಿದ್ದ ಬಗ್ಗೆ ಶಾರುಖ್ ಖಾನ್ ಅವರು ಮುಕ್ತವಾಗಿ  ಹೇಳಿಕೊಂಡಿದ್ದರು. ಇದೀಹ  ಸಿಗರೇಟ್ ಚಟದಿಂದ ಸಂಪೂರ್ಣ ವಿಮುಖರಾಗುವ ಮೂಲಕ ಯುವಕರಿಗೆ ಹೊಸ ಸಂದೇಶ ಸಾರಿದ್ದಾರೆ.

ಸಿನಿಮಾಗಳ ಮೂಲಕ ನಾನು ಇನ್ನೂ 10 ವರ್ಷ ನಿಮ್ಮನ್ನು ರಂಜಿಸಲಿದ್ದೇನೆ. ಇನ್ಮುಂದೆ ನಿಮಗೆ ಅಚ್ಚರಿ ಎನಿಸುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಹಲವು ಬಾರಿ ಶಾರುಖ್ ಖಾನ್ ಅವರು ಸಾರ್ವಜನಿಕವಾಗಿಯೂ ಸಿಗರೇಟ್ ಸೇದಿ ಹಲವರ ಕೆಂಗೆಣ್ಣಿಗೆ ಗುರಿಯಾಗಿದ್ದರು. 2012 ರ ಐಪಿಎಲ್ ಪಂದ್ಯವೊಂದರಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಕೂತು ಸಿಗರೇಟ್ ಸೇದಿದ್ದಕ್ಕೆ ಶಾರುಕ್ ಅವರಿಗೆ ಜೈಪುರ ನ್ಯಾಯಾಲಯ ₹1,000 ದಂಡ ವಿಧಿಸಿತ್ತು.

2017ರಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ನಡುವೆಯೇ ತಮ್ಮ ಮಕ್ಕಳ ಸಮ್ಮುಖದಲ್ಲೇ ಸಿಗರೇಟ್ ಸೇದಿ ಸಾಕಷ್ಟು ಟೀಕೆ ಎದುರಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ