ಬೀಸ್ಟ್, ಕೆಜಿಎಫ್ 2 ಜೊತೆ ಪೈಪೋಟಿಗಿಳಿದ ಶಾಹಿದ್ ಕಪೂರ್

ಗುರುವಾರ, 7 ಏಪ್ರಿಲ್ 2022 (11:26 IST)
ಮುಂಬೈ: ಭಾರತೀಯ ಸಿನಿಮಾರಂಗದಲ್ಲಿ ಇದೀಗ ದಕ್ಷಿಣ ಭಾರತದ ಸಿನಿಮಾಗಳದ್ದೇ ಹವಾ. ದಕ್ಷಿಣದ ಸಿನಿಮಾ ಎದುರು ಪೈಪೋಟಿಗಿಳಿಯಲು ಬಾಲಿವುಡ್ ಸಿನಿಮಾಗಳೂ ಹಿಂಜರಿಯುವಂತಾಗಿದೆ.

ಅಂತಹದ್ದರಲ್ಲಿ ಇದೀಗ ಬೀಸ್ಟ್, ಕೆಜಿಎಫ್ 2 ಅಬ್ಬರದ ನಡುವೆ ಬಾಲಿವುಡ್ ನ ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಸ್ಪರ್ಧೆಗಿಳಿಯಲು ಮುಂದಾಗಿದೆ.

ಕೆಜಿಎಫ್ 2 ಸಿನಿಮಾ ಬಿಡುಗಡೆ ದಿನವೇ ಅಂದರೆ ಏಪ್ರಿಲ್ 14 ರಂದೇ ಜೆರ್ಸಿ ಕೂಡಾ ರಿಲೀಸ್ ಆಗುತ್ತಿದೆ. ಬಾಲಿವುಡ್ ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ಕೆಜಿಎಫ್ ಎದುರು ಜೆರ್ಸಿ ತಲೆಎತ್ತಿ ನಿಲ್ಲುತ್ತಾ ಎಂದು ನೋಡಬೇಕಿದೆ. ಕೆಜಿಎಫ್, ಬೀಸ್ಟ್ ಇದ್ದರೂ ತಮ್ಮ ಸಿನಿಮಾವನ್ನು ನೋಡಲು ಪ್ರೇಕ್ಷಕರು ಬಂದೇ ಬರುತ್ತಾರೆ ಎಂಬ ವಿಶ್ವಾಸ ಶಾಹಿದ್ ಕಪೂರ್ ರದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ