ಶಂಕರ್ ಅಶ್ವಥ್ ‘ದೇವರಂಥ ಮನುಷ್ಯ’ ಎಂದು ಬಿರುದು ಕೊಟ್ಟಿದ್ದು ಕನ್ನಡದ ಈ ಖ್ಯಾತ ನಟನಿಗೆ
ಶುಕ್ರವಾರ, 22 ಜೂನ್ 2018 (14:37 IST)
ಬೆಂಗಳೂರು : ಸಿನಿಮಾ ತಾರೆಯರ ಮೇಲಿನ ಅಭಿಮಾನದಿಂದ ಜನರು ತಮ್ಮ ನೆಚ್ಚಿನ ನಟರಿಗೆ ಹೊಸ ಹೊಸ ಬಿರುದುಗಳನ್ನು ಕೊಡುತ್ತಾರೆ. ಅದೇರೀತಿ ಈಗ ನಟರೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹೊಸ ಬಿರುದಿನಿಂದ ಕರೆದಿದ್ದಾರೆ.
ಹೌದು. ಅವರು ಬೇರೆ ಯಾರು ಅಲ್ಲ. ನಾಗರಹಾವು ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರ ಮಾಡಿ ಖ್ಯಾತಿ ಪಡೆದಿದ್ದ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್. ಇವರಿಗೆ ಸಿನಿಮಾರಂಗದಲ್ಲಿ ಅವಕಾಶ ಸಿಗದ ಕಾರಣ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಹಾಯ ನೀಡಿದ್ದು ನಟ ದರ್ಶನ್.
ಆದ ಕಾರಣ ಶಂಕರ್ ಅಶ್ವಥ್ ಅವರು ದರ್ಶನ್ ಅವರನ್ನು ‘ದೇವರಂಥ ಮನುಷ್ಯ’ ಎಂದು ಕರೆದು ಬಿರುದು ಕೊಟ್ಟಿದ್ದಾರೆ. ಹಾಗೇ ನಾವು ಇನ್ನೊಬ್ಬರ ನೋವನ್ನು ಅರಿಯುವ ಸಂಸ್ಕಾರ ಉಳ್ಳ ಸಹೃದಯಿಯನ್ನು `ದೇವರಂಥ ಮನುಷ್ಯ’ ಎಂದು ಕರೆಯಬಹುದಲ್ಲವೆ ಎಂದು ಶಂಕರ್ ಅಶ್ವಥ್ ಅವರ ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ