ಚಿತ್ರೀಕರಣದಲ್ಲಿ ಅವರು ಚಿತ್ರತಂಡದವರೊಂದಿಗೆ ತಾವೊಬ್ಬ ಬಾಲಿವುಡ್ ನಟಿ ಎಂಬ ಸ್ವಲ್ಪವೂ ಹಮ್ಮು ಬಿಮ್ಮುಗಳಿಲ್ಲದೇ ಆರಾಮವಾಗಿ ಬೆರೆತಿದ್ದಾರೆ. ಚಿತ್ರೀಕರಣ ಪೂರ್ತಿಯಾದ ಬಳಿಕ ಧನ್ಯವಾದ ಸಲ್ಲಿಸಿದ ನಿರ್ದೇಶಕ ಪ್ರೇಮ್ ಕುತ್ತಿಗೆಗೆ ಶಾಲು ಸುತ್ತಿ ನಾನು ಸತ್ಯವತಿ ಎಂದು ಜೋರಾಗಿ ಕೂಗಿ ಫನ್ ಮಾಡಿದ್ದಾರೆ. ಇವರ ತುಂಟಾಟದ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.