ಮೂರು ದಿನ ನಡೆಯುವ ಅನಂತ್ ಅಂಬಾನಿ, ರಾಧಿಕಾ ಮದುವೆಗೆ ಡ್ರೆಸ್‌ಕೋಡ್ ಹೀಗಿದೆ
ಜುಲೈ 12ರಂದು ಮದುವೆಯ ಪ್ರಮುಖ ಕಾರ್ಯಕ್ರಮ ಶುಭ ವಿವಾಹ ನೆರವೇರಲಿದೆ. 13ರಂದು ಶನಿವಾರ ಶುಭ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಜುಲೈ 14ರಂದು ಮಂಗಳ ಉತ್ಸವ ಅಥವಾ ಆರತಕ್ಷತೆ ನಡೆಯಲಿದೆ ಎಂದು ವಿವಾಹದ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಮದುವೆ ಮಹೋತ್ಸವಕ್ಕೆ ಆಗಮಿಸುವವರಿಗೆ ವಸ್ತ್ರ ಸಂಹಿತೆ ಮಾಡಿದ್ದು ಜುಲೈ 12ರಂದು ಶುಭವಿವಾಕ್ಕೆ ಭಾರತದ ಸಾಂಪ್ರದಾಯಿಕ ಉಡುಗೆ, 2ನೇ ದಿನ ಜುಲೈ 13ರಂದು ಶನಿವಾರ ಶುಭ ಆಶೀರ್ವಾದ ಕಾರ್ಯಕ್ರಮದಲ್ಲಿ ಭಾರತೀಯ ಫಾರ್ಮಲ್ ಉಡುಗೆ ಹಾಗೂ ಜುಲೈ 14ರಂದು ಆರತಕ್ಷತೆಗೆ ಬರುವವರು ಸೀರೆ, ಲೆಹಂಗಾ, ಶೇರ್ವಾನಿಯಂತಹ ಇಂಡಿಯನ್ ಚಿಕ್ ಉಡುಗೆಗಳನ್ನು ಧರಿಸುವಂತೆ ವಸ್ತ್ರ ಸಂಹಿತೆ ಜಾರಿ ಮಾಡಿದೆ.