ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಶೈನ್ ಶೆಟ್ಟಿ: ಹುಡುಗಿ ಯಾರು ಗೊತ್ತಾ?

ಭಾನುವಾರ, 27 ಸೆಪ್ಟಂಬರ್ 2020 (10:10 IST)
ಬೆಂಗಳೂರು: ನಟ, ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ಶೈನ್ ಶೆಟ್ಟಿ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.


ಶೈನ್ ಮೊನ್ನೆಯಷ್ಟೇ ಇನ್ ಸ್ಟಾಗ್ರಾಂ ಪುಟದಲ್ಲಿ ಸದ್ಯದಲ್ಲೇ ನೀವೆಲ್ಲರೂ ನಿರೀಕ್ಷಿಸುತ್ತಿದ್ದ ಹೊಸ ಸುದ್ದಿ ಕೊಡುವುದಾಗಿ ಹೇಳಿದ್ದರು. ಇದೀಗ ಗಾಯಕಿ ಸಂಗೀತಾ ಜತೆ ಶೈನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಂಗೀತ ಕೂಡಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಶೈನ್ ಜತೆ ವಿಡಿಯೋ ಪೋಸ್ಟ್ ಮಾಡಿದ್ದು, ಸದ್ಯದಲ್ಲೇ ಸರ್ಪ್ರೈಸ್ ನೀಡುವುದಾಗಿ ಹೇಳಿದ್ದಾರೆ. ಇಬ್ಬರೂ ಅಧಿಕೃತವಾಗಿ ಘೋಷಣೆಯಷ್ಟೇ ಮಾಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ