ಶಿವಲಿಂಗ ಸಿನಿಮಾ ರೋಮ್ಯಾಂಟಿಕ್ ಸಾಂಗ್ ಶೂಟಿಂಗ್

ಬುಧವಾರ, 18 ನವೆಂಬರ್ 2015 (11:49 IST)
ಮೊನ್ನೆಯಷ್ಟೇ ಭುಜ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿವರಾಜ್ ಕುಮಾರ್ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದು ಕಿಲ್ಲಿಂಗ್ ವೀರಪ್ಪನ್ ಹಾಗೂ ಶಿವಲಿಂಗ. ಅದರಲ್ಲೂ ಕಿಲ್ಲಿಂಗ್ ವೀರಪ್ಪನ್ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಶಿವಣ್ಣ ಸದ್ಯ ಶಿವಲಿಂಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಅಂದ್ಹಾಗೆ ಸದ್ಯ ಶಿವಣ್ಣ ಶಿವಲಿಂಗ ಸಿನಿಮಾದ ರೋಮ್ಯಾಂಟಿಕ್ ಸಾಂಗ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ ಶಿವಣ್ಣ ಹಾಗೂ ವೇದಿಕಾ ನಡುವಿನ ರೋಮ್ಯಾಂಟಿಗ್ ಸಾಂಗಿನ ಶೂಟಿಂಗ್ ನಡೆಯುತ್ತಿದೆ. ವಿ.ಹರಿಕೃಷ್ಣ ಕಂಪೋಸ್ ಮಾಡಿರುವ ಈ ಹಾಡು ತುಂಬಾನೇ ರೋಮ್ಯಾಂಟಿಕ್ ಆಗಿ ಮೂಡಿ ಬಂದಿದೆಯಂತೆ. ಅಲ್ಲದೇ ಹಾಡು ಅಭಿಮಾನಿಗಳ ದಿಲ್ ಕದಿಯುತ್ತೆ ಅಂತಾ ಸಿನಿಮಾ ತಂಡ ಹೇಳಿದೆ. ಸಖತ್‌ ಕಲರ್‌ಫು ಲ್‌ ಹಾಡು ಇದಾಗಿದ್ದು, ಶಿವಣ್ಣ ಕೂಡಾ ಅಷ್ಟೇ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. 
 
ಚಿತ್ರದಲ್ಲಿ ಶಿವರಾಜ್ ಕುಮಾರ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇದು ಕೌಟುಂಬಿಕ ಸಿನಿಮಾವಾಗಿದೆ. ಚಿತ್ರದಲ್ಲಿ ಅವಿನಾಶ್‌, ಪ್ರದೀಪ್‌ ರಾವತ್‌, ಊರ್ವಶಿ ಸೇರಿದಂತೆ ಹಲವರು ನಟಿಸಿದ್ದಾರೆ. ಮಾಸ್‌ ಹಾಗೂ ಕ್ಲಾಸ್‌ಗೆ ಬೇಕಾದ ಅಂಶಗಳು ಈ ಚಿತ್ರದಲ್ಲಿರುವುದರಿಂದ ಪ್ರೇಕ್ಷಕನಿಗೆ ಇಷ್ಟವಾಗುತ್ತೆ ಅಂತಾ ಸಿನಿಮಾ ತಂಡದಲ್ಲಿದೆ. 

ವೆಬ್ದುನಿಯಾವನ್ನು ಓದಿ