ಶಿವಲಿಂಗನಾಗಿ ಬರ್ತಿದ್ದಾರೆ ಶಿವಣ್ಣ

ಸೋಮವಾರ, 24 ಆಗಸ್ಟ್ 2015 (10:56 IST)
ಸದ್ಯ ಮಗಳ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸಿರುವ ಶಿವಲಿಂಗ ಸಿನಿಮಾದ ಟೀಸರ್ ಹಾಗೂ ಮೇಕಿಂಗ್ ದೃಶ್ಯಗಳು ರಿಲೀಸ್ ಆಗಿವೆ.

ಆಪ್ತಮಿತ್ರ ಸಿನಿಮಾದ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಶಿವಲಿಂಗ.  ಇತ್ತೀಚೆಗೆ ಸಿನಿಮಾದ ಮೇಕಿಂಗ್ ಹಾಗೂ ಟೀಸರ್ ಅನ್ನು ಬಿಡುಗಡೆಗೊಳಿಸಲಾಯ್ತು. ಟೀಸರ್ ನಲ್ಲಿ ಶಿವಣ್ಣ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದ್ರೆ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್  ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಅನ್ನೋ ಸೂಚನೆ ಸಿಗುತ್ತಿದೆ.
     ಸಿನಿಮಾವನ್ನು ಕೆ.ಎ. ಸುರೇಶ್ ನಿರ್ಮಿಸಿದ್ದು, ಶಿವರಾಜ್ ಕುಮಾರ್ ಅವರಿಗೆ ವೇದಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲೇ ವೇದಿಕಾ ನಟನೆ ತುಂಬಾನೇ ಗಮನ ಸೆಳೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಈ ಸಿನಿಮಾ ಅತೀ ಶೀಘ್ರದಲ್ಲಿ ಪ್ರೇಕ್ಷಕರೆದುರಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ