ತಮಿಳಿನಲ್ಲಿ ಮಾತನಾಡಿ ಮತದಾರರನ್ನು ಓಲೈಸಲು ಹೋದ ಶಿವಣ್ಣಗೆ ಗುಮ್ಮಿದ ನೆಟ್ಟಿಗರು

Sampriya

ಶುಕ್ರವಾರ, 26 ಏಪ್ರಿಲ್ 2024 (19:50 IST)
photo Courtesy Instagram
ಬೆಂಗಳೂರು: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಗೆಲುವಿಗೆ ಪಣತೊಟ್ಟು ನಟ ಶಿವರಾಜ್‌ಕುಮಾರ್ ಅವರು ಶಿವಮೊಗ್ಗದಲ್ಲಿ ಪತ್ನಿ ಪರ ಭರ್ಜರಿ ಕ್ಯಾಂಪೇನ್ ಮಾಡಿದ್ದಾರೆ. ಇದೀಗ ಮತದಾರರನ್ನು ಓಲೈಸಲು ಹೋದ ಶಿವಣ್ಣನ ನಡೆಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಹೌದು ಶಿವಮೊಗ್ಗದಲ್ಲಿ ಮತಯಾಚನೆ ಮಾಡುವ ವೇಳೆ ಶಿವಣ್ಣ ತಮಿಳಿನಲ್ಲಿ ಮಾತನಾಡಲು ಹೋಗಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಶಿವಣ್ಣ ತಮಿಳಿನಲ್ಲಿ ಮಾತನಾಡಿದ ಹೇಳಿಕೆ ಹೀಗಿದೆ:

ಇಲ್ಲಿ ತಮಿಳಿನವರು ಜಾಸ್ತಿ ಇದ್ದಾರೆ ಅಂತ ಗೊತ್ತಾಯ್ತು. ಅವರು ತಮಿಳಿನವರಾ? ಇವರೆಲ್ಲ ತಮಿಳಿನವರಾ? ಎಲ್ಲರಿಗೂ ನಮಸ್ಕಾರ, ಜೈಲರ್ ನೋಡಿದ್ರಾ? ಇಷ್ಟಾಯ್ತಾ? ಕ್ಯಾಪ್ಟನ್ ಮಿಲ್ಲರ್
ನೋಡಿದ್ರಾ ಇಷ್ಟಾಯ್ತಾ? ಸಿನಿಮಾ ಚೆನ್ನಾಗಿತ್ತಾ? ನಾನು ಚೆನ್ನೈನಲ್ಲಿದ್ದೆ. ಅಲ್ಲಿಯೇ ಹುಟ್ಟಿದೆ, ಅಲ್ಲಿಯೇ ಬೆಳೆದೆ. ಅಲ್ಲಿಯೇ ಎಜುಕೇಷನ್ ಆಯ್ತು. ರಾಜ್​ಕುಮಾರ್ ಮಕ್ಕಳೆಲ್ಲರೂ ಅಲ್ಲಿಯೇ ಹುಟ್ಟಿದೆವು. ನಮಗೆ ಅಲ್ಲಿ ಮನೆ ಇತ್ತು. ಎಲ್ಲರೂ ಕನ್ನಡ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೆಟ್ಟಿಗರು ಶಿವಣ್ಣ ಮೇಲೆ ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಶಿವಣ್ಣ ಅದು ಬೇಕು. ನಾವಲ್ಲಿರಬೇಕಾದರೆ ತಮಿಳು ಮಾತನಾಡುತ್ತಿದ್ದೆವು. ನೀವಿಲ್ಲಿರುವಾಗ ಈಗ ಕನ್ನಡ ಮಾತನಾಡುತ್ತೀರಿ. ನಾವೆಲ್ಲಿ ಹೋಗ್ತೀವೋ ಆ ಭಾಷೆ ನಾವು ಕಲಿಯಬೇಕು. ಅದಕ್ಕೆ ನಾವು ಕೊಡುವ ಮರ್ಯಾದೆ. ಇಲ್ಲಿ ಊಟ ಮಾಡುವಾಗ ಈ ಭಾಷೆಗೆ ಮರ್ಯಾದೆ ಕೊಡಬೇಕು, ಅಲ್ಲಿ ಊಟ ಮಾಡುವಾಗ ಅಲ್ಲಿಯ ಭಾಷೆಯ ಮರ್ಯಾದೆ ಕೊಡಬೇಕು. ಸ್ಟೇಟ್ & ಸ್ಟೇಟ್​ಗೆ ಈ ಸಂಬಂಧ ಇರಬೇಕು. ಯಾವ ಸ್ಟೇಟ್​ಗೆ ಹೋಗುತ್ತೇವೋ, ಆ ಭಾಷೆಗೆ ನಾವು ಮರ್ಯಾದೆ ಕೊಡಬೇಕು ಎಂದು ಕ

ಶಿವಣ್ಣ ಅವರ ಈ ನಡೆಗೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಮಗೆ ಗೌರವ ಕೊಡುತ್ತೇವೆ, ಆದರೆ ವೋಟ್ ಕೊಡುವುದಿಲ್ಲ ಒಬ್ಬರು ಎಂದರೆ  ನೀವು ಕಾಂಗ್ರೆಸ್ ನವರ ಜೊತೆ ಸೇರಬೇಡಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದು ತಮಿಳುನಾಡು ಅಲ್ಲ ಕರ್ನಾಟಕ, ಇಲ್ಲಿ ಕನ್ನಡದಲ್ಲಿ ಮಾತಾಡಬೆಕು ಕನ್ನಡಿಗನಾಗಿ ಇರಬೇಕು ಎಂದು ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ