ರಾಮ್ ಚರಣ್ ಸಿನಿಮಾಗೆ ಶಿವಣ್ಣಗೆ ಆಫರ್

ಶುಕ್ರವಾರ, 8 ಡಿಸೆಂಬರ್ 2023 (13:39 IST)
ಬೆಂಗಳೂರು: ಇತ್ತೀಚೆಗೆ ಶಿವರಾಜ್ ಕುಮಾರ್ ಪರಭಾಷೆಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ತಮಿಳು, ತೆಲುಗಿನಲ್ಲಿ ಶಿವಣ್ಣನನ್ನು ಹಾಕಿಕೊಳ್ಳಲು ಚಿತ್ರತಂಡಗಳು ಕಾಯುತ್ತಿವೆ.

ಜೈಲರ್ ಸಿನಿಮಾ ರಿಲೀಸ್ ಆದ ಮೇಲೆ ಶಿವಣ್ಣನ ಖದರ್ ಪರಭಾಷಿಕರಿಗೂ ತಲುಪಿತ್ತು. ಇದಾದ ಬಳಿಕ ಅವರಿಗೆ ತಮಿಳು, ತೆಲುಗಿನಲ್ಲಿ ಸಾಕಷ್ಟು ಆಫರ್ ಬರುತ್ತಲೇ ಇವೆ. ಕ್ಯಾಪ್ಟನ್ ಮಿಲ್ಲರ್ ನಲ್ಲಿ ಈಗಾಗಲೇ ಧನುಷ್ ಜೊತೆ ಸಿನಿಮಾ ಮಾಡಿದ್ದಾರೆ.

ಇದಲ್ಲದೆ, ತೆಲುಗಿನಲ್ಲೂ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದೀಗ ರಾಮ್ ಚರಣ್ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ.

ಆದರೆ ರಾಮ್ ಚರಣ್ ನಾಯಕರಾಗಿರುವ ಸಿನಿಮಾವೊಂದರಲ್ಲಿ ಶಿವಣ್ಣಗೆ ವಿಶೇಷ ಪಾತ್ರ ಮಾಡಲು ಆಫರ್ ಬಂದಿದೆ. ಆದರೆ ಶಿವಣ್ಣ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಆದರೆ ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಬರಬಹುದು ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ