ಮೈಸೂರಿನಲ್ಲಿ ವಿಶೇಷ ಅಭಿಮಾನಿಯ ಭೇಟಿಯಾದ ರಾಮ್ ಚರಣ್ ತೇಜ

ಸೋಮವಾರ, 4 ಡಿಸೆಂಬರ್ 2023 (08:40 IST)
Photo Courtesy: Twitter
ಹೈದರಾಬಾದ್: ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ಗಾಗಿ ಮೈಸೂರಿನಲ್ಲಿ ರಾಮ್ ಚರಣ್ ತೇಜ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ರಾಮ್ ಚರಣ್ ಎರಡು ದಿನ ಶೂಟಿಂಗ್ ಮಾಡಿ ಬಳಿಕ ಮತದಾನ ಮಾಡಲು ಒಂದು ದಿನ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದಾರೆ.

ಈ ನಡುವೆ ಶೂಟಿಂಗ್ ಸೆಟ್ ನಲ್ಲಿ ರಾಮ್ ಚರಣ್ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದು ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೈಗಳಿಲ್ಲದ ವಿಕಲಚೇತನ ಅಭಿಮಾನಿಯೊಬ್ಬರು ರಾಮ್ ಚರಣ್ ರನ್ನು ನೋಡಲು ಸೆಟ್ ಗೆ ಬಂದಿದ್ದಾರೆ. ವಿಶೇಷವೆಂದರೆ ರಾಮ್ ಚರಣ್ ಖುದ್ದಾಗಿ ಆ ಅಭಿಮಾನಿಯ ಪಕ್ಕ ನೆಲದಲ್ಲಿ ಕುಳಿತು ಫೋಟೋಗೆ ಪೋಸ್ ನೀಡುವ ಮೂಲಕ ಖುಷಿಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ