ಸಿಎಂ ಸಿದ್ದು ಪ್ರಮಾಣವಚನಕ್ಕೆ ಬಂದ ಶಿವರಾಜ್ ಕುಮಾರ್ ಗೆ ಗಾಯ

ಭಾನುವಾರ, 21 ಮೇ 2023 (09:10 IST)
ಬೆಂಗಳೂರು: ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್ ಗೆ ಗಾಯವಾಗಿದೆ.

ನಿನ್ನೆ ಕಂಠೀರವ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಕೂಡಾ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮೆಟ್ಟಿಲಿಳಿಯುವಾಗ ಶಿವಣ್ಣ ಕಾಲು ಉಳುಕಿಸಿಕೊಂಡಿದ್ದಾರೆ.

ಬಳಿಕ ಕುಂಟಿಕೊಂಡೇ ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ಸಿದ್ದು ಪ್ರಮಾಣ  ವಚನ ಕಾರ್ಯಕ್ರಮದಲ್ಲಿ ಶಿವಣ್ಣ ಜೊತೆಗೆ ಕಮಲ್ ಹಾಸನ್, ದುನಿಯಾ ವಿಜಿ, ರಮ್ಯಾ, ಉಮಾಶ‍್ರೀ, ರಾಜೇಂದ್ರ ಸಿಂಗ್ ಬಾಬು, ಸಾಧು ಕೋಕಿಲಾ ಸೇರಿದಂತೆ ಸಿನಿ ಗಣ್ಯರೂ ಭಾಗಿಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ