ಆಂಕರ್ ಅನುಶ್ರೀ ಜತೆಗೆ ಮತ್ತೊಬ್ಬ ಸ್ಟಾರ್ ನಟಿಯ ಹೆಸರು ಬಾಯ್ಬಿಟ್ಟ ಡ್ರಗ್ ಪೆಡ್ಲರ್

ಶುಕ್ರವಾರ, 2 ಅಕ್ಟೋಬರ್ 2020 (09:32 IST)
ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಡ್ರಗ್ ಪೆಡ್ಲರ್ ಸ್ಯಾಮ್ ಆಂಕರ್ ಅನುಶ್ರೀ ಜತೆಗೆ ಮತ್ತೊಬ್ಬ ಕಿರುತೆರೆ ಸ್ಟಾರ್ ನ ಹೆಸರು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.


ವಿಚಾರಣೆ ವೇಳೆ ಅನುಶ್ರೀ ಅಲ್ಲದೆ, ಕರಾವಳಿ ಮೂಲದ ಬಿಗ್ ಬಾಸ್ ಸ್ಪರ್ಧಿ, ಕಿರುತೆರೆಯ ಸ್ಟಾರ್ ನಟನೊಬ್ಬ ಪಾರ್ಟಿಯಲ್ಲಿ ಭಾಗವಹಿಸಿದ್ದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇದು ಆಂಕರ್ ಅನುಶ್ರೀಗೆ ಸಂಕಷ್ಟ ತಂದೊಡ್ಡಲಿದೆ. ಇನ್ನೊಂದೆಡೆ ಮತ್ತಿಬ್ಬರು ಸ್ಟಾರ್ ಗಳು ಯಾರು ಎಂಬ ಕುತೂಹಲ ಮೂಡಿದೆ. ಈ ಮೂಲಕ ಡ್ರಗ್ ಮಾಫಿಯಾದಲ್ಲಿ ದಿನಕ್ಕೊಂದು ಸ್ಟಾರ್ ಗಳ ಹೆಸರು ಬಹಿರಂಗವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ