ಶಿವರಾಜ್ ಕುಮಾರ್-ರಜನೀಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಶೂಟಿಂಗ್ ಮುಕ್ತಾಯ
ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ತಮಿಳು ಸಿನಿಮಾ ಒಪ್ಪಿಕೊಂಡಿದ್ದರು. ವಿಶೇಷ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವ ಬಗ್ಗೆ ಸ್ವತಃ ಸನ್ ಪಿಕ್ಚರ್ಸ್ ಮಾಹಿತಿ ನೀಡಿದೆ.
ಜೈಲರ್ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕೊನೆಯ ದಿನದ ಶೂಟಿಂಗ್ ನಲ್ಲಿ ರಜನಿ, ತಮನ್ನಾ ಜೊತೆ ಚಿತ್ರತಂಡ ಫೋಟೋ ತೆಗೆಸಿಕೊಂಡಿದೆ. ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.