ತಲೈವಾ ರಜನೀಕಾಂತ್ ಗೆ ಇದೇ ಕೊನೇ ಸಿನಿಮಾ?!
ರಜನಿಗೆ ಈಗ 72 ವರ್ಷ. ಇತ್ತೀಚೆಗೆ ಅವರ ಆರೋಗ್ಯವೂ ಮೊದಲಿನಂತಿಲ್ಲ. ಹೀಗಾಗಿ ರಜನಿ ಸಿನಿಮಾಗಳಿಗೆ ಗುಡ್ ಬೈ ಹೇಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ರಜನಿ ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ಸಿನಿಮಾ ನಟನೆಯಿಂದ ದೂರವಿರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಲೋಕೇಶ್ ಕನಗರಾಜು ನಿರ್ದೇಶನದಲ್ಲಿ ರಜನಿ ಸಿನಿಮಾ ಮಾಡಲಿದ್ದು ಇದುವೇ ಅವರ ಕೊನೆಯ ಸಿನಿಮಾವಾಗುವ ಸಾಧ್ಯತೆಯಿದೆ. ಇದು ರಜನಿಯ 171 ನೇ ಸಿನಿಮಾವಾಗಿರಲಿದೆ.