ನಮ್ಮ ಮನೆ ಹತ್ರ ಬರಬೇಡಿ ಎಂದು ಖಡಕ್ ಆಗಿ ಸೂಚಿಸಿದ ಶಿವರಾಜಕುಮಾರ್

ಶನಿವಾರ, 4 ಜುಲೈ 2020 (09:14 IST)
ಬೆಂಗಳೂರು: ಕೊರೋನಾ ಕಾರಣದಿಂದ ಸ್ಟಾರ್ ಗಳ ಬರ್ತ್ ಡೇ ಸೆಲೆಬ್ರೇಷನ್ ಗೆ ಬ್ರೇಕ್ ಬಿದ್ದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಅದೇ ಹಾದಿಯಲ್ಲಿದ್ದಾರೆ.


ಜುಲೈ 12 ರಂದು ಶಿವರಾಜಕುಮಾರ್ ಬರ್ತ್ ಡೇ. ಆ ದಿನ ಪ್ರತೀ ವರ್ಷವೂ ಅವರ ಮನೆ ಮುಂದೆ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಜತೆ ಬರ್ತ್ ಡೇ ಆಚರಿಸಿಕೊಳ್ಳಲು ಹಾರ-ತುರಾಯಿಗಳೊಂದಿಗೆ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ಹಾಗೆ ಮಾಡಬೇಡಿ ಎಂದು ಶಿವಣ್ಣ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.

ನಮಗೆಲ್ಲರಿಗೂ ನಮ್ಮೆಲ್ಲರ ಸುರಕ್ಷತೆ ಮುಖ್ಯ. ಹೀಗಾಗಿ ಗುಂಪು ಸೇರಿ ಆರೋಗ್ಯಕ್ಕೆ ಕುತ್ತು ತರುವುದು ಬೇಡ. ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸೋಣ. ಯಾರೂ ಈ ಬಾರಿ ಮನೆ ಮುಂದೆ ಬರ್ತ್ ಡೇ ಆಚರಿಸಲು ಬರಬೇಡಿ. ನಾನು ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಪರಿಸ್ಥಿತಿ ಎಲ್ಲಾ ಸರಿಯಾದ ಬಳಿಕ ನಾವು ಜತೆಯಾಗಿ ಒಂದು ದಿನ ಸೇರಿ ಸಂಭ್ರಮ ಪಡೋಣ ಎಂದು ಶಿವಣ‍್ಣ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ