ಮನೆ ಸಹಾಯಕಿಯ ಮೇಲೆ ರಾಧಿಕಾ ಪಂಡಿತ್ ತೋರಿದ ಅಕ್ಕರೆ ನೋಡಿ ಗ್ರೇಟ್ ಎಂದ ನೆಟ್ಟಿಗರು

ಶುಕ್ರವಾರ, 3 ಜುಲೈ 2020 (09:43 IST)
ಬೆಂಗಳೂರು: ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳು, ಪತಿಯ ಬಗ್ಗೆ ಬರೆದುಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಅವರು ತಮ್ಮ ಮನೆಯ ವಿಶೇಷ ಸದಸ್ಯರ ಬಗ್ಗೆ ಬರೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ರಾಧಿಕಾ ತಮ್ಮ ಮನೆ ಕೆಲಸದಾಕೆಯ ಬಗ್ಗೆ ಅಭಿಮಾನದಿಂದ ಬರೆದುಕೊಂಡಿದ್ದಾರೆ. ಆಕೆಯ ಜತೆ ಒಂದು ಸೆಲ್ಫೀ ಮತ್ತು ಆಕೆಯ ಬರ್ತ್ ಡೇಗಾಗಿ ಕೇಕ್ ಮಾಡಿದ್ದನ್ನು ಫೋಟೋ ಪ್ರಕಟಿಸಿದ್ದಕ್ಕೆ ನೆಟ್ಟಿಗರು ನಿಮ್ಮದು ತುಂಬಾ ವಿಶಾಲ ಹೃದಯ ಮೇಡಂ ಎಂದು ಕೊಂಡಿದ್ದಾರೆ.

‘ಈಕೆ ಗೀತಾ. 8 ವರ್ಷದಿಂದ ನಮಗೆ ಸಹಾಯಕಿಯಾಗಿದ್ದಾಳೆ. ಅವಳೀಗ ನಮ್ಮ ಕುಟುಂಬವೇ ಆಗಿದ್ದಾಳೆ. ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಈ ಕಠಿಣ ಪರಿಸ್ಥಿತಿಯಲ್ಲಿ ಇಂತಹವರ ಬಗ್ಗೆ ನಾವು ಹೆಚ್ಚು ಗಮನ ಕೊಡಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಇವರನ್ನು ಕಡೆಗಣಿಸಬಾರದು ಮತ್ತು ಅವರ ಕಷ್ಟಗಳಿಗೆ ಸ್ಪಂದಿಸಬೇಕಿದೆ’ ಎಂದು ಬರೆದುಕೊಂಡಿರುವ ರಾಧಿಕಾ ಆಕೆಯ ಬರ್ತ್ ಡೇ ದಿನ ಆಕೆಗಾಗಿ ತಾವೇ ಕೈಯಾರೆ ತಯಾರಿಸಿ ಕೇಕ್ ಜತೆಗೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದನ್ನು ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ