ಪ್ರೇಕ್ಷಕರ ತಲೆಗೆ ಹುಳ ಬಿಟ್ಟ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್

ಶುಕ್ರವಾರ, 3 ಜುಲೈ 2020 (09:24 IST)
ಬೆಂಗಳೂರು: ಕೆಜಿಎಫ್ 2 ಬಗ್ಗೆ ಅಪ್ ಡೇಟ್ ಕೊಡಿ ಎಂದು ಕೇಳುತ್ತಿರುವ ಅಭಿಮಾನಿಗಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಫೋಟೋವೊಂದನ್ನು ಹಾಕಿ ತಲೆಗೆ ಹುಳ ಬಿಟ್ಟಿದ್ದಾರೆ.


ಪ್ರಶಾಂತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 1 ಭಾಗದ ಚಿತ್ರೀಕರಣದ ಫೋಟೋವೊಂದನ್ನು ಹಾಕಿಕೊಂಡಿದ್ದು ಏನಿರಬಹುದು ಗೆಸ್ ಮಾಡಿ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಶಾಂತ್ ರ ಈ ಫೋಟೋ ನೋಡುತ್ತಿದ್ದಂತೇ ಅಭಿಮಾನಿಗಳು ಅದೆಲ್ಲಾ ಅತ್ಲಾಗಿರಲಿ, ಮೊದಲು ಕೆಜಿಎಫ್ 2 ಟೀಸರ್ ಯಾವಾಗ ಹೇಳಿ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಹಾಗಿದ್ದರೆ ಸದ್ಯದಲ್ಲೇ ಕೆಜಿಎಫ್ 2 ಬಗ್ಗೆ ದೊಡ್ಡ ಅಪ್ ಡೇಟ್ ಗ್ಯಾರಂಟಿ ಎಂದು ಊಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ