ಶಿವರಾಜ್ ಕುಮಾರ್ ಮೊಬೈಲ್ ನಲ್ಲಿ ಈಗಲೂ ಇದೆ ಪಾರ್ವತಮ್ಮ, ಪುನೀತ್ ನಂಬರ್!
ಪುನೀತ್ ಆಗಲೀ, ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಆಗಲೀ ಅವರನ್ನೆಲ್ಲಾ ಮರೆಯಕ್ಕೇ ಆಗಲ್ಲ. ಅವರಿಲ್ಲ ಎನ್ನುವುದನ್ನು ನಂಬಲೂ ಆಗ್ತಾ ಇಲ್ಲ ನನಗೆ ಎಂದು ದುಃಖದಿಂದಲೇ ಹೇಳಿರುವ ಶಿವಣ್ಣ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಹೇಳಿದ್ದಾರೆ.
ನನ್ನ ಮೊಬೈಲ್ ನಲ್ಲಿ ಈಗಲೂ ಅಮ್ಮ, ಪುನೀತ್ ನ ನಂಬರ್ ಇದೆ. ಅದನ್ನು ಡಿಲೀಟ್ ಮಾಡಲು ಮನಸ್ಸೇ ಆಗಲ್ಲ. ಏನೇ ಇದ್ರೂ ಅಪ್ಪು ನಂಗೆ ಫೋನ್ ಮಾಡ್ತಿದ್ದ. ಅದನ್ನೆಲ್ಲಾ ಹೇಗೆ ಮರೆಯಲಿ? ಎಂದು ಶಿವಣ್ಣ ನೊಂದು ನುಡಿದಿದ್ದಾರೆ.