20 ವರ್ಷಗಳ ಬಳಿಕ ಒಂದಾಗಲಿದೆ ಶಿವರಾಜ್ ಕುಮಾರ್-ಶಶಿ ಕುಮಾರ್ ಜೋಡಿ

ಶನಿವಾರ, 21 ನವೆಂಬರ್ 2020 (10:42 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಜೋಡಿ ನಟರ ಪೈಕಿ ಶಿವರಾಜ್ ಕುಮಾರ್ ಮತ್ತು ಶಶಿಕುಮಾರ್ ಕೂಡಾ ಒಂದು ಒಂದು. ಈ ಜೋಡಿ ಈಗ ಮತ್ತೆ ಒಂದಾಗುತ್ತಿದೆ.


ಬರೋಬ್ಬರಿ 20 ವರ್ಷಗಳ ಬಳಿಕ ಶಶಿಕುಮಾರ್-ಶಿವಣ್ಣ ಜೋಡಿ ಜತೆಯಾಗಿ ಒಂದೇ ಸಿನಿಮಾದಲ್ಲಿ ನಟಿಸಲಿದೆ. ವಿಜಯ್ ಮಿಲ್ಟನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಈ ಜೋಡಿ ಮತ್ತೆ ತೆರೆ ಹಂಚಿಕೊಳ್ಳಲಿದೆ. ಈ ಮೊದಲು 2001 ರಲ್ಲಿ ಬಹಳ ಚೆನ್ನಾಗಿದೆ ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದೇ ಕೊನೆಯ ಸಿನಿಮಾವಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ