ಸ್ಯಾಂಡಲ್‌ವುಡ್ ಯುವರಾಜ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವರ್ಷದ ನಟ ಅಂತ ಹೇಳಬಹುದು. ಯಾಕೆಂದರೆ ಅವರ ಚಿತ್ರಗಳು ಬಾಕ್ಸಾಫೀಸಲ್ಲಿ ಭರ್ಜರಿ ಸೌಂಡ್ ಮಾಡಿವೆ. 2016ರ ಹೊಸ ವರ್ಷದಲ್ಲಿ ಶಿವಣ್ಣ ಖಾತೆ ಓಪನ್ ಮಾಡಿದ್ದೇ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಮೂಲಕ.
ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಕಿಲ್ಲಿಂಗ್ ವೀರಪ್ಪನ್, ಶಿವಲಿಂಗ ಮತ್ತು ಸಂತೆಯಲ್ಲಿ ನಿಂತ ಕಬೀರ. ಎರಡು ಚಿತ್ರಗಳು ಬಾಕ್ಸಾಫೀಸಲ್ಲಿ ಗೆಲುವು ಕಂಡಿವೆ. ಕಬೀರ ಮಾತ್ರ ಉತ್ತಮ ಪ್ರಶಂಸೆಗೆ ಪಾತ್ರವಾಯಿತು. ಅವರ ಹಲವಾರು ಚಿತ್ರಗಳು ನಿರ್ಮಾಣ ಹಂತದಲ್ಲಿವೆ.