ಕೆಲವೊಂದು ಪ್ರಮುಖ ಭಾಗಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಿಕೊಳ್ಳಲಿದ್ದು, ಅದಾದ ಬಳಿಕ ಚಿತ್ರ ಕತಾರ್‌ಗೆ ಪಯಣ ಬೆಳಸಲಿದೆ. ಅಲ್ಲಿ ಹಾಡೊಂದನ್ನುಚಿತ್ರೀಕರಿಸಿಕೊಳ್ಳಲಿದ್ದಾರೆ. ಫೆಬ್ರವರಿ ಕೊನೆಗೆ ಚಿತ್ರೀಕರಣ ಮುಗಿಸಿಕೊಂಡು ಏಪ್ರಿಲ್ ವೇಳೆಗೆ ಚಿತ್ರಮಂದಿರಗಳಲ್ಲಿ ’ಲೀಡರ್’ ಆಟ ಶುರುವಾಗಲಿದೆ.
ಬಹುತಾರಾಗಣದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಯೋಗಿ, ವಿಜಯ್ ರಾಘವೇಂದ್ರ, ಪ್ರಣೀತಾ, ಗುರು ಜಗ್ಗೇಶ್, ಪರಿಣಿತಾ ಕಿಟ್ಟಿ, ಆಶಿಕಾ, ಶರ್ಮಿಳಾ ಮಾಂಡ್ರೆ ತಾರಾಗಣದಲ್ಲಿದ್ದಾರೆ. ತರುಣ್ ಶಿವಪ್ಪ ನಿರ್ಮಿಸುತ್ತಿರುವ ಚಿತ್ರ. ವೀರ್ ಸಮರ್ಥ್ ಸಂಗೀತ, ಗುರುಪ್ರಶಾಂತ್ ರೈ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.