’ಶ್ರೀಕಂಠ’ನ ನಿರೀಕ್ಷೆಯಲ್ಲಿ ಶಿವಣ್ಣನ ಅಭಿಮಾನಿಗಳು

ಮಂಗಳವಾರ, 3 ಜನವರಿ 2017 (10:16 IST)
ಈ ವರ್ಷದ ಮೊದಲ ಚಿತ್ರವಾಗಿ ಸೆಂಚುರಿ ಸ್ಟಾರ್ ಶಿವಣ್ಣ ಅಭಿಮನಯದ ಶ್ರೀಕಂಠ ತೆರೆಕಾಣುತ್ತಿದೆ. ಚಿತ್ರದ ಸ್ಟಂಟ್‌ಗಳು, ಶಿವಣ್ಣ ಗೆಟಪ್, ಸ್ಟೈಲ್ ಚಿತ್ರದ ಪ್ರಮುಖ ಆಕರ್ಶಣೆಯಾಗಿದೆ. ಮಂಜು ಸ್ವರಾಜ್ ನಿರ್ದೇಶನದ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸುರೇಶ್ ಬಾಬು ಅವರ ಛಾಯಾಗ್ರಹಣದ ಬಹು ಕೋಟಿ ಚಿತ್ರ `ಶ್ರೀಕಂಠ’ದಲ್ಲಿ ಚಾಂದಿನಿ ಶ್ರೀಧರನ್ ನಾಯಕಿಯಾಗಿ ಅಭಿನಯಿಸಿದ್ದಾರೆ.
 
ಸೆಂಚುರಿ ಸ್ಟಾರ್ ಡಾ ಶಿವರಾಜಕುಮಾರ್ ಒಬ್ಬ ಕಾಮನ್ ಮ್ಯಾನ್ ಆಗಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಅದರ ಪರಿಣಾಮ ಈ ಚಿತ್ರದ ಕಥಾ ವಸ್ತು. ಇದು ಒಂದು ಪ್ರಯಾಣದಲ್ಲಿ ಜರುಗುವ ಕಥೆ. ವಿಜಯ ರಾಘವೇಂದ್ರ ಈ ಚಿತ್ರದಲ್ಲಿ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಅಚ್ಯುತ್ ಕುಮಾರ್, ದಿಲೀಪ್ ಶೆಟ್ಟಿ, ಬುಲ್ಲೆಟ್ ಪ್ರಕಾಶ್, ಅನಿಲ್ ಕುಮಾರ್ ಹಾಗೂ ಅತಿಥಿ ಪಾತ್ರದಲ್ಲಿ ಸ್ಪರ್ಶ ರೇಖಾ ಮುಂತಾದವರಿದ್ದಾರೆ.
 
 ದೀಪು ಎಸ್ ಕುಮಾರ್ ಅವರ ಸಂಕಲನ,  ಎಂ ಸಿದ್ದೇಗೌಡ, ಡಾ ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಪ್ರದ್ಯುಮ್ನ ಅವರ ಗೀತ ಸಾಹಿತ್ಯ, ಪ್ರಕಾಶ್ ಜಡೆಯರ್ ಅವರ ಸಂಭಾಷಣೆ ಇರುವ ಈ `ಶ್ರೀಕಂಠ’ ಸಿನಿಮಾಕ್ಕೆ ಮದನ್ ಹರಿಣಿ, ಮುರಳಿ, ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನವಿದೆ. ವಿಕ್ರಮ್ ಮೋರ್ ಹಾಗೂ ಡಿಫರೆಂಟ್ ಡ್ಯಾನಿ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ, ಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.  ಮಹಾಶೈಲ ಸಿನಿಬಂಧ ಅಡಿಯಲ್ಲಿ ಬಿ ಮಹಾದೇವು ಅವರ ಸುಪುತ್ರ ಎಂ ಎಸ್ ಮನು ಗೌಡ ನಿರ್ಮಾಣದ ಚಿತ್ರ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ