ಡಿಸೆಂಬರ್ 4ರಂದು ಶೋಭಿತಾ ಕೈ ಹಿಡಿಯಲಿದ್ದಾರೆ ನಾಗಚೈತನ್ಯ, ಮದುವೆ ವೆನ್ಯೂ ಹೀಗಿದೆ

Sampriya

ಸೋಮವಾರ, 18 ನವೆಂಬರ್ 2024 (17:18 IST)
Photo Courtesy X
ಈಚೆಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಶೋಭಿತಾ ಧೂಳಿಪಾಲ ಹಾಗೂ ನಟ ನಾಗಚೈತನ್ಯ ಅವರು ಇದೀಗ ಮದುವೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಆಗಸ್ಟ್ 8 ರಂದು ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ ಜೋಡಿ, ಮದುವೆಯ ದಿನಾಂಕ ಅಥವಾ ಸ್ಥಳವನ್ನು ಇದುವರೆಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮದುವೆ ಆಮಂತ್ರಣದ ಪ್ರಕಾರ ಡಿಸೆಂಬರ್ 4ರಂದು ಈ ಜೋಡಿ ಹಸೆಮಣೆ ಏರಲಿದೆ.

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಮದುವೆಗೆ ಕೇವಲ ಕುಟುಂಬ ಹಾಗೂ ಆತ್ಮೀಯರಿಗಷ್ಟೇ ಆಹ್ವಾನಿಸಲಾಗಿದೆ ಎನ್ನಲಾಗಿದೆ. ಹೈದರಾಬಾದ್‌ನಲ್ಲಿ ಆರತಕ್ಷತೆಯೊಂದಿಗೆ ಡೆಸ್ಟಿನೇಷನ್ ವೆಡ್ಡಿಂಗ್ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಜೋಡಿಯು ANR ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಮೊದಲ ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತು. ಅಲ್ಲಿ ಶೋಭಿತಾ ಅವರನ್ನು ಅಕ್ಕಿನೇನಿ ಕುಟುಂಬದ ಹೊಸ ಸದಸ್ಯರಾಗಿ ಪರಿಚಯಿಸಲಾಯಿತು. ನಾಗ ಚೈತನ್ಯ ನೀಲಿ ಬಣ್ಣದ ಉಡುಪಿನಲ್ಲಿ ಡ್ಯಾಶಿಂಗ್ ಆಗಿ ಕಾಣಿಸಿಕೊಂಡರೆ, ಸೋಭಿತಾ ರೋಮಾಂಚಕ ಹಸಿರು ಉಡುಪಿನಲ್ಲಿ ಕಾಂತಿಯುತವಾಗಿ ಕಾಣಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ