ಹುತಾತ್ಮ ಸೈನಿಕರಿಗೆ ಸೇನೆ ಸೇರುವಂತೆ ಒತ್ತಾಯಿಸಿಲ್ಲ: ಅಜ್ಞಾನ ಪ್ರದರ್ಶಿಸಿದ ಹಿರಿಯ ನಟ ಓಂಪುರಿ

ಮಂಗಳವಾರ, 4 ಅಕ್ಟೋಬರ್ 2016 (16:05 IST)
ಬಾಲಿವುಡ್ ಚಿತ್ರರಂಗದಲ್ಲಿ ಪಾಕಿಸ್ತಾನದ ಕಲಾವಿದರಿಗೆ ಅವಕಾಶ ಕೊಡಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿರಿಯ ನಟ ಓಂಪುರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅವರ ನೀಡಿದ ಹೇಳಿಕೆ ಇದೀಗ ಕೋಲಾಹಲ ವೆಬ್ಬಿಸಿದೆ.
 
65 ವರ್ಷ ವಯಸ್ಸಿನ ಹಿರಿಯ ನಟ ಓಂಪುರಿ, ದೇಶದ ರಕ್ಷಣೆಯಲ್ಲಿ ತೊಡಗಿರುವ ನಮ್ಮ ಸೈನಿಕರ ಬಗ್ಗೆ ಅಗೌರವ ತೋರಿದ್ದಲ್ಲದೇ ಅವರಿಗೆ ಸೇನೆ ಸೇರಿ ಎಂದು ನಾವು ಯಾರು ಒತ್ತಾಯ ಮಾಡಿರಲಿಲ್ಲ ಎಂದು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ.
 
ಹುತಾತ್ಮರಾದ ಸೈನಿಕರಿಗೆ ಸೇನೆ ಸೇರಲಿ ಎಂದು ಕೋರಿದವರಾರು? ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳುವಂತೆ ಹೇಳಿದವರಾರು? ಭಾರತ ಮತ್ತು ಪಾಕಿಸ್ತಾನದ ನಡುವಿನ ಶತ್ರುತ್ವ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ನಂತಾಗಬೇಕೆ? ನೂರಾರು ವರ್ಷಗಳ ಕಾಲ ಹೋರಾಟ ಮಾಡುತ್ತಲೇ ಇರಬೇಕೇ? ಪಾಕಿಸ್ತಾನವನ್ನು ಯುದ್ಧಕ್ಕೆ ಪ್ರಚೋದಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಭಾರತದಲ್ಲಿರುವ ಅನೇಕ ಮುಸ್ಲಿಂ ಸಮುದಾಯದ ಬಾಂಧವರು ಸಂಬಂಧಿಕರು ಪಾಕಿಸ್ತಾನದಲ್ಲಿದ್ದಾರೆ. ನೆರೆಯ ರಾಷ್ಟ್ರವಾದ ಭಾರತದೊಂದಿಗೆ ಪಾಕಿಸ್ತಾನ ಅದು ಹೇಗೆ ಯುದ್ಧ ಮಾಡುತ್ತದೆ ಎಂದು ನೀಡಿರುವ ಹೇಳಿಕೆ ರಾಜಕೀಯ, ಸಿನೆಮಾ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
 
 ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ನವ ನಿರ್ಮಾಣ ಸೇನೆ, ಪಾಕಿಸ್ತಾನದ ಕಲಾವಿದರು 48 ಗಂಟೆಯೊಳಗಾಗಿ ಭಾರತವನ್ನು ತೊರೆಯುವಂತೆ ಗಡುವು ನೀಡಿತ್ತು. ಬಾಲಿವುಡ್ ಚಿತ್ರ ನಿರ್ಮಾಪಕರ ಸಂಘ ಕೂಡಾ ಈಗಾಗಲೇ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಘೋಷಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ