ರಾಕಿಂಗ್ ಸ್ಟಾರ್ ಯಶ್ ಸೈಮಾ ‘ಬೆಸ್ಟ್ ಸ್ಟೈಲ್ ಐಕಾನ್’ ಆಗಿದ್ದು ಹೇಗೆ? ಪತ್ನಿ ರಾಧಿಕಾ ಪಂಡಿತ್ ಹೇಳ್ತಾರೆ ಕೇಳಿ!

ಶನಿವಾರ, 17 ಆಗಸ್ಟ್ 2019 (10:17 IST)
ಬೆಂಗಳೂರು: ದಕ್ಷಿಣ ಭಾರತದ ಸಿನಿಮಾಗಳಿಗೆ ನೀಡಲಾಗುವ ಪ್ರತಿಷ್ಠಿತ ಸೈಮಾ ‘ಬೆಸ್ಟ್ ಸ್ಟೈಲ್ ಐಕಾನ್ ಪ್ರಶಸ್ತಿ’ ಕನ್ನಡ ವಿಭಾಗದಲ್ಲಿ ಈ ಬಾರಿ ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಗೆ ಸಂದಿದೆ.


ಈ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಖುಷಿಯಿಂದಲೇ ಬರೆದುಕೊಂಡಿದ್ದು, ತಮ್ಮ ಪತಿ ಸ್ಟೈಲಿಶ್ ಆಗಿ ಕಾಣಲು ಯಾರು ಕಾರಣ ಎಂದು ಬಹಿರಂಗಪಡಿಸಿದ್ದಾರೆ.

ತನಗೆ ಹಾಗೂ ತಮ್ಮ ಪತಿಯ ಡ್ರೆಸ್ಸಿಂಗ್ ಸ್ಟೈಲ್ ಮಾಡುವ ಸನಿಯಾ ಸರ್ದಾರಿಯಾ ಬಗ್ಗೆ ರಾಧಿಕಾ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ನಾವಿಬ್ಬರೂ ಚೆನ್ನಾಗಿ ಕಾಣಿಸಲು ಸನಿಯಾ ಕಾರಣ. ನಮ್ಮೆಲ್ಲಾ ಕಿರಿ ಕಿರಿಗಳನ್ನು ಸಹಿಸಿಕೊಂಡು ನಮಗೆ ಒಪ್ಪುವ ರೀತಿಯ ಡ್ರೆಸ್ಸಿಂಗ್ ಮಾಡುವುದು ಇವರೇ. ನಮಗೆ ವೈಯಕ್ತಿಕವಾಗಿಯೂ ಇವರೊಂದಿಗೆ ವಿಶೇಷ ನಂಟಿದೆ. ಯಶ್ ಸ್ಟೈಲ್ ಐಕಾನ್ ಆಗುವುದರಲ್ಲಿ ಇವರ ಪಾತ್ರ ದೊಡ್ಡದು ಎಂದು ರಾಧಿಕಾ ಖುಷಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ