ಸಿಂಬು ಬಹುಕಾಲದಿಂದ ಇಷ್ಟಪಟ್ಟ ವಸ್ತುವನ್ನು ಗಿಫ್ಟ್ ಕೊಟ್ಟ ತಾಯಿ

ಬುಧವಾರ, 2 ಡಿಸೆಂಬರ್ 2020 (12:45 IST)
ಚೆನ್ನೈ : ನಟ ಸಿಂಬು ಪ್ರಸ್ತುತ ಸುಚೀಂದ್ರನಾಥ್ ನಿರ್ದೇಶನದ ಈಶ್ವರನ್ ಚಿತ್ರದಲ್ಲಿ ಮತ್ತು ಪ್ರಭು ನಿರ್ದೇಶನದ ಕಾನ್ಪರೆನ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಟ ಸಿಂಬು ಅವರು ರಾಜೇಂದರ್ ಮತ್ತು ಉಷಾ ರಾಜೇಂರ್ ದಂಪತಿಯ ಪುತ್ರನಾಗಿದ್ದು, ಅವರು ಹಲವು ಬಾರಿ ತಾನು ಜಗತ್ತಿನಲ್ಲಿ ಅತಿಯಾಗಿ ಇಷ್ಟಪಡುವುದು ತಮ್ಮ ತಾಯಿಯನ್ನು ಎಂದು ಹೇಳಿದ್ದಾರೆ. ಇದೀಗ ಅವರ ತಾಯಿ  ನಟ ಸಿಂಬು ಅವರಿಗೆ ತುಂಬಾ ಇಷ್ಟವಾದ ವಸ್ತುವನ್ನು ಉಡುಗೊರೆಯನ್ನು ನೀಡಿದ್ದಾರೆ.

ಹೌದು. ಉಷಾ ಅವರು ತಮ್ಮ ಮಗ ಸಿಂಬು ಅವರಿಗೆ ಅವರು ಬಹಳ ಕಾಲದಿಂದ ಪ್ರೀತಿಸುತ್ತಿದ್ದ ಮಿನಿ ಕೂಪರ್ ಕಾರನ್ನು ಗಿಫ್ಟ್ ನೀಡಿದ್ದಾರೆ. ಈ ಕಾರಿನ ಬೆಲೆ 40 ಲಕ್ಷ ರೂ. ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ