ಬೆಂಗಳೂರು: ದೊಡ್ಮನೆ ಮಗ ಯುವರಾಜ್‌ಕುಮಾರ್ ಅವರು ಇದೀಗ ಪತ್ನಿ ಶ್ರೀದೇವಿಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ. ಮಾನಸಿಕ ಕಿರುಕುಳ ಎಂದು ಆರೋಪಿಸಿ ಯುವರಾಜ್‌ಕುಮಾರ್ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ವಿಚಾರವಾಗಿ ಹ್ಯಾಟ್ರಿಕ್ ಹೀರೊ ಪ್ರತಿಕ್ರಿಯೆ ನೀಡಿದ್ದಾರೆ. ಯುವರಾಜ್‌ಕುಮಾರ್ ಅವರ ಡಿವೋರ್ಸ್ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಮಾಹಿತಿ ಇಲ್ಲದೇ ಮಾತನಾಡೋದು ಸರಿಯಿಲ್ಲ ಎಂದು ಶಿವಣ್ಣ ಮಾತನಾಡಿದ್ದಾರೆ.
ಡಿವೋರ್ಸ್ ಬಗ್ಗೆ ಮೊಬೈಲ್‌ನಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಆ ರೀತಿ ಏನಾದರೂ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಯುವ ಡಿವೋರ್ಸ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ತಿಳಿದುಕೊಂಡು ಮಾತನಾಡುತ್ತೇವೆ. ಗೊತ್ತಿಲ್ಲದೇ ಮಾತನಾಡುವುದು ಸರಿಯಲ್ಲ ಎಂದು ಅವರೂ ಹೇಳಿದ್ದಾರೆ.