ಬಿಡುಗಡೆಗೆ ಮುನ್ನ ದಾಖಲೆ ಬರೆದ ಮಾರ್ಟಿನ್‌: ಚಿತ್ರಕ್ಕಾಗಿ ಅಮೆರಿಕದಲ್ಲಿ ಬೃಹತ್ ಆರ್ಕೆಸ್ಟ್ರಾ

Sampriya

ಭಾನುವಾರ, 26 ಮೇ 2024 (14:21 IST)
Photo Courtesy X
ಬೆಂಗಳೂರು: ಆ್ಯಕ್ಷನ್‌ ಸ್ಟಾರ್‌ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಮಾರ್ಟಿನ್ ಸಿನಿಮಾ ಇದೇ ವರ್ಷ ಅಕ್ಟೋಬರ್‌ 11ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವು ಬಿಡುಗಡೆಗೂ ಮುನ್ನ ಹಲವು ದಾಖಲೆಗಳನ್ನು ನಿರ್ಮಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಅಮೆರಿಕದ ಲಾಸ್ ಏಂಜಲ್ಸ್​ನಲ್ಲಿ ಈ ಸಿನಿಮಾಕ್ಕೆ ಸಂಗೀತವನ್ನು ಲೈವ್ ರೆಕಾರ್ಡ್ ಮಾಡಲಾಗಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಚಿತ್ರ ನಿರ್ದೇಶಕ ಪ್ರೇಮ್ ಇಬ್ಬರೂ ಖುದ್ದಾಗಿ ತೆರಳಿ ಸಂಗೀತಗಾರರಿಗೆ ನಿರ್ದೇಶನ ನೀಡಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಕೆಡಿ ಸಿನಿಮಾಕ್ಕೆ ಆರ್ಕೆಸ್ಟ್ರಾ ಒದಗಿಸಿರುವ ಆರ್ಕೆಸ್ಟ್ರಾ ಸಿಇಒ ಬೇಲಿಂಟ್ ಸಪ್​ಜೋನ್ ಹೇಳಿರುವಂತೆ, ಇಷ್ಟು ದೊಡ್ಡ ಆರ್ಕೆಸ್ಟ್ರಾ ಬಳಸುತ್ತಿರುವ ಮೊದಲ ಭಾರತೀಯ ಸಿನಿಮಾ ಇದು. ಇನ್ಯಾವುದೇ ಭಾರತೀಯ ಸಿನಿಮಾಕ್ಕೆ ನಾವು ಇಷ್ಟು ದೊಡ್ಡ ಆರ್ಕೆಸ್ಟ್ರಾ ಬಳಸಿಲ್ಲ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಅದ್ಭುತವಾದ ಸಂಗೀತವನ್ನು ನಾವು ರೆಕಾರ್ಡ್ ಮಾಡಿದ್ದೇವೆ. ಭಾರತೀಯ ಸಂಗೀತವನ್ನು ಭಿನ್ನವಾಗಿ ನಾವು ನುಡಿಸಿದ್ದು ಅಪರೂಪವಾಗಿತ್ತು. ಸಂಗೀತದಲ್ಲಿ ಸಾಕಷ್ಟು ರಿದಮ್​ಗಳಿದ್ದವು, ಅದು ನುಡಿಸುವುದು ಸವಾಲಿನದ್ದಾಗಿತ್ತು. ಇದೊಂದು ದೊಡ್ಡ ಸಿನಿಮಾ ಎಂಬುದು ನಮಗೆ ಅರ್ಥವಾಗಿದೆ. ನಮಗೆ ನಿಮ್ಮೊಂದಿಗೆ (ಅರ್ಜುನ್ ಜನ್ಯ) ಕೆಲಸ ಮಾಡುವುದು ಹೆಮ್ಮೆ ಎನಿಸುತ್ತದೆ. ನೀವು (ಪ್ರೇಮ್) ಭಾರತದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು ಎಂದು ತಿಳಿದುಬಂತು  ಎಂದು ಸಪ್‌ಜೋನ್‌ ಹೇಳಿದ್ದಾರೆ.

ಇಷ್ಟು ದೊಡ್ಡ ಆರ್ಕೆಸ್ಟ್ರಾ ಹಾಕಿ ಸಂಗೀತ ರೆಕಾರ್ಡ್ ಮಾಡಿರುವ ಮೊದಲ ಸಿನಿಮಾ ನಮ್ಮ ಕನ್ನಡದ ಸಿನಿಮಾ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಎಲ್ಲವೂ ನಮ್ಮ ಕೆಡಿಗಾಗಿ ಎಂದಿದ್ದಾರೆ ಪ್ರೇಮ್.

ಸಿನಿಮಾದ ಹಾಡುಗಳಿಗೆ ಪ್ರೇಮ್ ಹಾಗೂ ಮಂಜುನಾಥ್ ಕನ್ನಡ ಲಿರಿಕ್ಸ್ ಬರೆದಿದ್ದಾರೆ. ಹಿಂದಿ ಸಾಹಿತ್ಯವನ್ನು ರಖೀಬ್ ಆಲಮ್ ಬರೆದಿದ್ದಾರೆ, ತಮಿಳು ಸಾಹಿತ್ಯವನ್ನು ಮದನ್ ಕರ್ಕಿ ಬರೆದಿದ್ದಾರೆ. ಮಲಯಾಳಂ ಸಾಹಿತ್ಯವನ್ನು ಗೋಪಾಲನ್ ಬರೆದಿದ್ದಾರೆ. ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಶ್ಮಾ ನಾಣಯ್ಯ ಇನ್ನೂ ಕೆಲವರು ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ