ಕೆಜಿಎಫ್ ಇಷ್ಟವಾಗಿಲ್ಲ ಎಂದ ಪ್ರೇಕ್ಷಕರೂ ಇದ್ದಾರೆ!

ಭಾನುವಾರ, 23 ಡಿಸೆಂಬರ್ 2018 (09:56 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ ದೇಶದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಚಿತ್ರ ಚೆನ್ನಾಗಿದೆ ಎಂಬ ವಿಮರ್ಶೆಗಳು ಎಲ್ಲಾ ಕಡೆಯಿಂದ ಬರುತ್ತಿವೆ. ಅದರ ನಡುವೆ ಚಿತ್ರ ಚೆನ್ನಾಗಿಲ್ಲ ಎಂಬ ಟ್ವಿಟಟಿಗರೂ ಇದ್ದಾರೆ.


ತಮಿಳು, ತೆಲುಗು ಭಾಷೆಯಲ್ಲಿ ಚಿತ್ರ ನೋಡಿದ ಕೆಲವು ಪ್ರೇಕ್ಷಕರು ಚಿತ್ರ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆಂಟಿಮೆಂಟ್ ಇಲ್ಲ, ಬರೀ ಯಶ್ ಹೀರೋಯಿಸಂ, ಫೈಟಿಂಗ್ ಮಾತ್ರವೇ ಇರೋದು. ಇದು ಭಾರೀ ನಿರಾಶೆ ಮಾಡಿದೆ ಎಂದು ಕೆಲವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ವಿಪರೀತ ಫೈಟಿಂಗ್ ಸೀಕ್ವೆನ್ಸ್ ಗಳು ನೋಡಲು ತಲೆಚಿಟ್ಟು ಹಿಡಿಸುತ್ತಿವೆ. ಸ್ವಲ್ಪ ಸೆಂಟಿಮೆಂಟ್ ಕೂಡಾ ಇದ್ದಿದ್ದರೆ ಚೆನ್ನಾಗಿರ್ತಿತ್ತು. ಚಿತ್ರದ ತುಂಬಾ ಯಶ್ ಡೈಲಾಗ್ ಗಳು, ಮ್ಯಾನರಿಸಂ ಬಿಟ್ಟರೆ ಬೇರೇನೂ ಇಲ್ಲ ಎಂದು ಕೆಲವರು ಅಭಿಪ್ರಾಯ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ