ಈ ನಡುವೆ ಸೋನಲ್ ಮೊನ್ನೆ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳು ಅವರನ್ನು ಮುತ್ತಿಕೊಂಡಿದೆ. ಈ ಪೈಕಿ ಒಬ್ಬರು ಮೇಡಂ ಮದುವೆಯಾದ್ಮೇಲೆ ಯಾಕೆ ದಪ್ಪ ಆಗಿದ್ದೀರಿ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸೋನಲ್, ಸಾಕಷ್ಟು ಫಂಕ್ಷನ್ ಇತ್ತಲ್ಲ ಚೆನ್ನಾಗಿ ತಿಂದಿದ್ದೀನಿ. ಜಿಮ್ ಗೆ ಹೋಗಿಲ್ಲ. ಮತ್ತೆ ಮದುವೆಯಾದ್ಮೇಲೆ ಗಂಡ ಚೆನ್ನಾಗಿ ನೋಡಿಕೊಳ್ತಿದ್ದಾನೆ ಎಂದರೆ ದಪ್ಪ ಆಗ್ತಾರಂತೆ. ಸೋ.. ನಾನೂ ಹ್ಯಾಪಿ ಆಗಿದ್ದೀನಿ ಎಂದಿದ್ದಾರೆ.
ಇನ್ನು, ಮದುವೆಯಾದ ಬಳಿಕ ತಮ್ಮ ಸಿನಿಮಾ ಪ್ಲ್ಯಾನ್ ಬಗ್ಗೆಯೂ ಸೋನಲ್ ಮಾತನಾಡಿದ್ದಾರೆ. ನವಂಬರ್ ವರೆಗೂ ಸಿನಿಮಾಗಳಿಂದ ಬ್ರೇಕ್ ತಗೊಂಡಿದ್ದೇನೆ. ನವಂಬರ್ ಬಳಿಕ ಮತ್ತೆ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದೇನೆ. ಒಂದು ರಿಲೀಸ್ ಗೆ ರೆಡಿಯಿದೆ, ಇನ್ನೆರಡು ಸಿನಿಮಾ ಶೂಟಿಂಗ್ ಆಗಬೇಕಿದೆ ಎಂದಿದ್ದಾರೆ.