ಖ್ಯಾತ ಗಾಯಕ ಎಸ್ ಪಿಬಿ, ಪ್ರಿಯಾಮಣಿಗೂ ಇಂದು ಜನ್ಮದಿನ

ಶನಿವಾರ, 4 ಜೂನ್ 2022 (10:14 IST)
ಬೆಂಗಳೂರು: ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಇಂದು ಬಹುಭಾಷಾ ಕಲಾವಿದೆ ಪ್ರಿಯಾಮಣಿ, ಖ್ಯಾತ ಗಾಯಕ, ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂಗೂ ಕೂಡಾ ಇಂದು ಜನ್ಮದಿನವಾಗಿದೆ.

ಮಲಯಾಳಂ ಮೂಲದಿಂದು ಬಂದು ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ಅಭಿನಯಿಸಿ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಪ್ರಿಯಾಮಣಿ ಇಂದು 38 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಇನ್ನೊಂದೆಡೆ ಮೂಲತಃ ತೆಲುಗಿನವರೇ ಆದರೂ ಕನ್ನಡಿಗರ ಮಾನಸಪುತ್ರ ಎಂದೇ ಕರೆಯಿಸಿಕೊಳ್ಳುವ ಪಂಚಭಾಷಾ ಗಾಯಕ, ನಮ್ಮ ನಿಮ್ಮೆಲ್ಲರ ಮೆಚ್ಚಿನ ಎಸ್.ಪಿ. ಬಾಲಸುಬ್ರಮಣ್ಯಂ ಜನ್ಮಜಯಂತಿ ಇಂದು. ಇಂದು ಅವರು ನಮ್ಮೊಂದಿಗೆ ಶಾರೀರಿಕವಾಗಿ ಇಲ್ಲದೇ ಹೋದರೂ ಅವರ ಜನ್ಮದಿನದಂದು ಹಾಡುಗಳ ಮೂಲಕ ನೆನೆಸಿಕೊಳ್ಳುತ್ತೇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ