ಟಾಲಿವುಡ್ ನಲ್ಲಿ ರಶ್ಮಿಕಾಗೆ ಈಗ ಶ್ರೀಲೀಲಾ ದುಷ್ಮನ್!

ಬುಧವಾರ, 14 ಜೂನ್ 2023 (16:52 IST)
Photo Courtesy: Twitter
ಹೈದರಾಬಾದ್: ಕನ್ನಡ ನಾಡಿನಿಂದ ತೆಲುಗು ಚಿತ್ರರಂಗಕ್ಕೆ ವಲಸೆ ಹೋಗಿ ಅಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣಗೆ ಟಫ್ ಕಾಂಪಿಟೀಷನ್ ಕೊಡ್ತಿದ್ದಾರೆ ಶ್ರೀಲೀಲಾ. ಈ ಮೂಲಕ ತೆಲುಗಿನಲ್ಲಿ ಕನ್ನಡತಿಯರದ್ದೇ ಕಾರುಬಾರಾಗಿದೆ.

ಶ್ರೀಲೀಲಾಗೆ ಇಂದು ಜನ್ಮದಿನವಾಗಿದ್ದು, ಆಕೆಯ ಹುಟ್ಟುಹಬ್ಬದಂದು ಭರ್ಜರಿ ಸುದ್ದಿ ಸಿಕ್ಕಿದೆ. ಶ್ರೀಲೀಲಾ ಈಗ ಅಲ್ಲು ಅರ್ಜುನ್ ಗೆ ನಾಯಕಿಯಾಗಿದ್ದಾರೆ. ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸುತ್ತಿರುವ ಅಲ್ಲು ಅರ್ಜುನ್ ನಾಯಕರಾಗಿರುವ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಇಂದು ಶ್ರೀಲೀಲಾ ಜನ್ಮದಿನ ಪ್ರಯುಕ್ತ ಅಲ್ಲು ಅರ್ಜುನ್ ಜೊತೆಗೆ ಶ್ರೀಲೀಲಾ ಇರುವ ಪೋಸ್ಟರ್ ಕೂಡಾ ರಿಲೀಸ್ ಆಗಿದೆ.

ಇದಲ್ಲದೆ ಶ್ರೀಲೀಲಾ ಮಹೇಶ್ ಬಾಬು ಅವರ ಗುಂಟೂರು ಖಾರಂ, ನಂದಮೂರಿ ಬಾಲಕೃಷ್ಣ ಸಿನಿಮಾ, ನಿತಿನ್ ಜೊತೆಗೆ ಮತ್ತೊಂದು ಸಿನಿಮಾ ಸೇರಿದಂತೆ ಹಲವು ಟಾಲಿವುಡ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಇಷ್ಟು ದಿನ ಟಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣರದ್ದೇ ಹವಾ ನಡೆಯುತ್ತಿತ್ತು. ಇದೀಗ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದು, ರಶ್ಮಿಕಾ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ