ಆದಿಪುರುಷ್ ಸಿನಿಮಾ ಉಚಿತ ನೋಡಲು ಹೀಗೆ ಮಾಡಿ!

ಶುಕ್ರವಾರ, 9 ಜೂನ್ 2023 (07:30 IST)
Photo Courtesy: Twitter
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಆದಿಪುರುಷ್ ಸಿನಿಮಾ ಉಚಿತವಾಗಿ ನೋಡಲು ಪ್ರೇಕ್ಷಕರಿಗೆ ಒಂದು ಅವಕಾಶ ನೀಡಲಾಗಿದೆ.

ಕಾರ್ತಿಕೇಯ 2, ಕಾಶ್ಮೀರ್ ಫೈಲ್ಸ್ ನಂತಹ ಸಿನಿಮಾ ನಿರ್ಮಾಣ ಮಾಡಿರುವ ಅಭಿಷೇಕ್ ಅಗರ್ವಾಲ್ ಆದಿಪುರುಷ್ ಸಿನಿಮಾದ 10 ಸಾವಿರ ಟಿಕೆಗಳನ್ನು ಉಚಿತವಾಗಿ ಹಂಚಲು ತೀರ್ಮಾನಿಸಿದ್ದಾರೆ.

ಅಭಿಷೇಕ್ ಮೂಲತಃ ರಾಮಭಕ್ತ. ಆದಿಪುರುಷ್ ಸಿನಿಮಾದಲ್ಲಿ ರಾಮ-ರಾವಣನ ಕತೆಯಿದೆ. ಹೀಗಾಗಿ ಅಭಿಷೇಕ್ ರಾಮನ ಮೇಲಿನ ಭಕ್ತಿಯಿಂದ 10 ಸಾವಿರ ಟಿಕೆಟ್ ಖರೀದಿಸಿ ಉಚಿತವಾಗಿ ಹಂಚಲು ತೀರ್ಮಾನಿಸಿದ್ದಾರೆ. ಈ ಮೂಲಕ ರಾಮ ನಾಮ ಎಲ್ಲಾ ದಿಕ್ಕುಗಳಿಗೂ ಹರಡಲಿ ಎನ್ನುವುದು ಅವರ ಉದ್ದೇಶ. ತೆಲಂಗಾಣದಲ್ಲಿರುವ ಸರ್ಕಾರಿ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಉಚಿತವಾಗಿ 10 ಸಾವಿರ ಟಿಕೆಗಳನ್ನು ಹಂಚಲಿದ್ದಾರೆ. ಅದಕ್ಕಾಗಿ ಅವರು ತಮ್ಮ ಸ್ವ ವಿವರಗಳೊಂದಿಗೆ ಗೂಗಲ್ ಫಾರ್ಮ್ ಒಂದನ್ನು ಭರ್ತಿ ಮಾಡಬೇಕಾಗುತ್ತದೆ. ಈ ಗೂಗಲ್ ಫಾರ್ಮ್ ಲಿಂಕ್ ನ್ನು ಅವರು ತಮ್ಮ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ