ನಟ ಆರ್ಯನ ವಿರುದ್ಧ ವಂಚನೆ ಆರೋಪ ಮಾಡಿದ ಶ್ರೀಲಂಕಾದ ಮಹಿಳೆ

ಸೋಮವಾರ, 1 ಮಾರ್ಚ್ 2021 (10:20 IST)
ಚೆನ್ನೈ : ಜರ್ಮನಿಯಲ್ಲಿ ವಾಸಿಸುತ್ತಿರುವ ಶ್ರೀಲಂಕಾದ ಮಹಿಳೆಯೊಬ್ಬಳು ತಮಿಳುನಾಡು ಸರ್ಕಾರಕ್ಕೆ ನಟ ಆರ್ಯನ ವಿರುದ್ಧ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಕೋರಿ ಪ್ರಧಾನಿ ಮೋದಿಗೆ ಇಮೇಲ್ ಕಳುಹಿಸಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಟ ಆರ್ಯ ಕೊರೊನಾ ವೈರಸ್ ಲಾಕ್ ಡೌನ್ ವೇಳೆ ಯಾವುದೇ ಹೊಸ ಚಿತ್ರಗಳಿಗೆ ಸಹಿ ಹಾಕಿಲ್ಲವಾದ ಕಾರಣ ತನ್ನಿಂದ 70ಲಕ್ಷದ 40ಸಾವಿರ ರೂ. ತೆಗೆದುಕೊಂಡಿದ್ದಾನೆ. ಬಳಿಕ ಆತನನ್ನು ಸಂಪರ್ಕಿಸಿದ್ದಾಗ ಮದುವೆಯನ್ನು ನಿರಾಕರಿಸಿದ್ದಲ್ಲದೇ  ಹಣವನ್ನು ಹಿಂದಕ್ಕೆ ನೀಡದೆ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಇದಕ್ಕೆ ಸಂಬಂಧಿಸಿದ ಸಾಕ್ಷಿಗಳಿವೆ ಎಂದು  ತಿಳಿಸಿದ್ದಾಳೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನೆಟಿಜನ್, ಆರ್ಯ ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಮದುವೆಯಾಗಿದ್ದಾರೆ. ಹಾಗೇ ಕೊರೊನಾ ಸಮಯದಲ್ಲಿ ಒಂದು ಚಿತ್ರವನ್ನು ಮುಗಿಸಿ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ