ಮದುವೆಯಾಗುವ ಭರವಸೆ ನೀಡಿ ಇಂತಹ ಕೆಲಸ ಮಾಡಿದ ನೆರೆಮನೆಯಾತ

ಸೋಮವಾರ, 1 ಮಾರ್ಚ್ 2021 (09:07 IST)
ಚೆನ್ನೈ : ಮದುವೆಯಾಗುವ ಭರವಸೆ ನೀಡಿ ಯುವಕನೊಬ್ಬ 17 ವರ್ಷದ ಹುಡುಗಿಯ ಮೇಲೆ ಮಾನಭಂಗ ಎಸಗಿದ ಘಟನೆ ತಮಿಳುನಾಡಿನ ಚೆನ್ನೈ ನಲ್ಲಿ ನಡೆದಿದೆ.

ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೇ ಹುಡುಗಿಯ ಕುಟುಂಬದವರು ಪರದಾಡುತ್ತಿದ್ದಾಗ ನೆರೆಮನೆಯಲ್ಲಿದ್ದ ಆರೋಪಿ ಯುವಕ ಹಣದ ಸಹಾಯ ಮಾಡಿದ್ದಾನೆ. ಇದರಿಂದ ಹುಡುಗಿ ಮತ್ತು ಯುವಕನ ನಡುವೆ ಸ್ನೇಹ ಬೆಳೆದಿದೆ. ಇದನ್ನು ದುರುಪಯೋಗಪಡಿಸಿಕೊಂಡ ಯುವಕ ಮದುವೆಯಾಗುವುದಾಗಿ ನಂಬಿಸಿ ಹುಡುಗಿಯ ಮೇಲೆ ಮಾನಭಂಗ ಎಸಗಿದ್ದಾನೆ.

ಹುಡುಗಿಯ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಾಗ  ಆಕೆ ಗರ್ಭಿಣಿ ಎಂಬುದು ಮನೆಯವರಿಗೆ ತಿಳಿದಿದ್ದು, ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ