ಶ್ರೀಲಂಕಾ ಗಾಯಕಿ ಬಾಯಲ್ಲಿ ಕೆಜಿಎಫ್ ಕನ್ನಡ ಹಾಡು! ನೆಟ್ಟಿಗರು ಫಿದಾ
ಕನ್ನಡ ಬಾರದೇ ಇದ್ದರೂ ಸ್ಪಷ್ಟವಾಗಿ ಕನ್ನಡ ಉಚ್ಚಾರಣೆ ಮಾಡಿರುವ ಈಕೆಗೆ ಸಾಮಾಜಿಕ ಜಾಲತಾಣಗಳ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಮೂಲದವರೇ ಕನ್ನಡ ಮಾತನಾಡಲು ಹಿಂಜರಿಯುವಾಗ ವಿದೇಶಿ ಗಾಯಕಿಯೊಬ್ಬಳು ಇಷ್ಟು ಅದ್ಭುತವಾಗಿ ಹಾಡಿದ್ದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.