ಕೆಜಿಎಫ್ 2 ತಂಡಕ್ಕೆ ಬಿಗ್ ಶಾಕ್ : ಕೇಸ್ ಹಾಕಿದ ನಟೋರಿಯಸ್ ರೌಡಿ

ಶನಿವಾರ, 28 ಸೆಪ್ಟಂಬರ್ 2019 (18:51 IST)
ರಾಕಿಂಗ್ ಸ್ಟಾರ್‌ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಚಿತ್ರ ತಂಡಕ್ಕೆ ಮತ್ತೊಂದು ದೊಡ್ಡ ಶಾಕ್ ಬಿದ್ದಿದೆ.


ಕೆಜಿಎಫ್ ನಟೋರಿಯಸ್ ರೌಡಿ ತಂಗಂ ಕುಟುಂಬದಿಂದ ಚಿತ್ರದ ವಿರುದ್ಧ ಕೆಜಿಎಫ್ ಕೋರ್ಟ್ ನಲ್ಲಿ ದಾವೆ ದಾಖಲು ಮಾಡಲಾಗಿದೆ.

ಕೆಜಿಎಫ್ ಚಾಪ್ಟರ್-1 ಚಿತ್ರದಲ್ಲಿ ಬರುವ ಯಶ್ ಪಾತ್ರ ತಮ್ಮ ಮಗನ ನಿಜ ಜೀವನದ ಪಾತ್ರ ಹೋಲುತ್ತದೆ ಎಂದು ತಂಗಂ ತಾಯಿ ಪೌಳಿ ಕೋರ್ಟ್ ನಲ್ಲಿ ದಾವೆ ಹೂಡಿದ್ದಾಳೆ.
ನಮ್ಮ ಕುಟುಂಬದವರ ಅನುಮತಿ ಇಲ್ಲದೇ ಚಿತ್ರದಲ್ಲಿ ನಮ್ಮ ಮಗನ ನಿಜಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂದು ತಂಗಂ ತಾಯಿ ಆರೋಪ ಮಾಡಿದ್ದಾಳೆ.

ಕೆಜಿಎಫ್ ನಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ 1990ರ ದಶಕದಲ್ಲಿ ನಟೋರಿಯಸ್ ರೌಡಿಯಾಗಿದ್ದ ತಂಗಂ,
ಕೆಜಿಎಫ್ ಚಾಪ್ಟರ್-1 ಚಿತ್ರದಲ್ಲಿ ನಾಯಕ ಯಶ್ ಮುಂಬಯಿನಲ್ಲಿ ರೌಡಿಯಾಗಿದ್ದು, ಸುಪಾರಿ ಪಡೆದು ಕೆಜಿಎಫ್ ಗೆ ಬರುತ್ತಾನೆ. ತಂಗಂ ಕೆಜಿಎಫ್ ನಲ್ಲಿ ಕಿಲ್ಲರ್ ರೌಡಿಯಾಗಿದ್ದು, ಪೊಲೀಸರ ಕಾಟ ಜಾಸ್ತಿ ಆದ ಮೇಲೆ ಮುಂಬಯಿಯಲ್ಲಿ ತಲೆಮರೆಸಿಕೊಳ್ಳತ್ತಾನೆ.
ಮುಂಬಯಿಯಲ್ಲಿ ಕೂಡ ಮರ್ಡರ್, ದರೋಡೆ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಮತ್ತೆ ಕೆಜಿಎಫ್ ಗೆ ಬರುತ್ತಾನೆ.
ಕೆಜಿಎಫ್ 1 ಚಿತ್ರದಲ್ಲಿ ಬರುವ ಯಶ್ ಹಲವು ಸನ್ನಿವೇಶಗಳು ನಮ್ಮ ಮಗನ ಹಲವು ಸನ್ನಿವೇಶಗಳು ಹೋಲುತ್ತವೆ ಎಂಬುದು ತಂಗಂ ತಾಯಿ ಆರೋಪ ಮಾಡಿದ್ದಾರೆ.

ಚಿತ್ರದಲ್ಲಿ ಯಶ್ ಪೊಲೀಸರಿಗೆ ಬೀರು ಬಾಟಲ್ ಹೊಡೆಯುವ ಸನ್ನಿವೇಶವಿದೆ, ನಮ್ಮ ಮಗ ಕೂಡ ಪೋಲಿಸರಿಗೆ ಬೀರು ಬಾಟಲ್ ನಲ್ಲಿ ಹೊಡೆದಿದ್ದ. ಇದನ್ನೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಕೊಡ ತಂಗಂ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಅಂತ ತಂಗಂ ತಾಯಿ ಪೌಳಿ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಈ ಹಿನ್ನಲೆ ಅಕ್ಟೋಬರ್ 9 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಸಮನ್ಸ್ ನೀಡಿದೆ ಕೋರ್ಟ್.

ತಂಗಂ ಕೆಜಿಎಫ್ ನಲ್ಲಿ ನಟೋರಿಯಸ್ ರೌಡಿಯಾಗಿದ್ದು, 150 ಕ್ಕೂ ಹೆಚ್ಚು ಕೊಲೆ, ದರೋಡೆ ಕೇಸ್ ಗಳು ಅತನ ಮೇಲಿದ್ದವು.
1997ರಲ್ಲಿ ಆಂಧ್ರದ ಕುಪ್ಪಂನ ರೈಲ್ವೆ ಗೇಟ್ ಬಳಿ ಕರ್ನಾಟಕ ಪೊಲೀಸರು ತಂಗಂನನ್ನು  ಎನ್ ಕೌಂಟರ್ ಮಾಡಿದ್ರು.
ಮೃತ ತಂಗಂ ಕುಟುಂಬ ಕೂಡ ಅಪರಾಧ ಜಗತ್ತಿನಲ್ಲಿ ತೊಡಗಿತ್ತು. ತಂಗಂನ ಇಬ್ಬರು ಅಣ್ಣತಮ್ಮಂದಿರು ಪೊಲೀಸರ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ರು.

ಕೆಜಿಎಫ್ ನಲ್ಲಿ ದರೋಡೆ ಮಾಡಿದ ಚಿನ್ನವನ್ನು ಮುಂಬಯಿ, ಕೇರಳದಲ್ಲಿ ಮಾರಾಟ ಮಾಡುತ್ತಿದ್ರು ತಂಗಂ ತಂಡದವರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ