ಶ್ರುತಿ ಹರಿಹರನ್ ಗೆ ಮತ್ತೆ MeToo ಕೇಸ್ ಸಂಕಷ್ಟ
2018 ರಲ್ಲಿ ಶ್ರುತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಪ್ರಕರಣ ದಾಖಲಿಸಿದ್ದರು. ಚಿತ್ರೀಕರಣ ವೇಲೆ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಶ್ರುತಿ ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ಸಿಗದ ಹಿನ್ನಲೆಯಲ್ಲಿ ಬಿ ರಿಪೋರ್ಟ್ ತಯಾರಿಗೆ ಸಿದ್ಧರಾಗಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಈಗ ಮೂರು ದಿನಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಶ್ರುತಿ ಹರಿರಹನ್ ಗೆ ನೋಟಿಸ್ ನೀಡಿದ್ದಾರೆ.