ತಂದೆಯ ಗೆಲುವಿಗೆ ಪಣತೊಟ್ಟಿರುವ ಬಾಲಿವುಡ್ ನಟಿ ನೇಹಾ ಶರ್ಮಾರಿಂದ ಬಿರುಸಿನ ಪ್ರಚಾರ
ನೇಹಾ ಶರ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಬಾಲಿವುಡ್ ನಟಿ ನೇಹಾ ಶರ್ಮಾ ಅವರ ತಂದೆ ಅನಿಲ್ ಶರ್ಮಾ ಬಿಹಾರದ ಭಗಲ್ಪುರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಂದೆ ಪರವಾಗಿ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ನೇಹಾ ಅವರು ಈ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ.
ಇನ್ನು ನೇಹಾ ಶರ್ಮಾ ಅವರು ಭಗಲ್ಪುರ ಮಾತ್ರವಲ್ಲದೇ ಬಂಕಾ, ಕಿಶನ್‌ಗಂಜ್, ಕತಿಹಾರ್ ಮತ್ತು ಪುರ್ನಿಯಾ ಕ್ಷೇತ್ರಗಳಲ್ಲಿನ ಮತ ಪ್ರಚಾರ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.