ಕೂಲಿ, ವಾರ್ 2 ಮುಂದೆಯೂ ಬಗ್ಗದ ಸು ಫ್ರಮ್ ಸೋ
ರಜನೀಕಾಂತ್ ಕೂಲಿ ಸಿನಿಮಾ ಮೊದಲ ದಿನವೇ 150 ಕೋಟಿ ಕಲೆಕ್ಷನ್ ಮಾಡಿದೆ. ವಾರ್ 2 ಕಲೆಕ್ಷನ್ ಕೂಡಾ 80 ಕೋಟಿ ರೂ. ತಲುಪಿದೆ. ಈ ಎರಡೂ ಸಿನಿಮಾಗಳ ನಡುವೆ ಸು ಫ್ರಮ್ ಸೋ ಸಿನಿಮಾ ಡಲ್ ಆಗಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು.
ಆದರೆ ಸು ಫ್ರಮ್ ಸೋ ಸಿನಿಮಾ ನಿನ್ನೆಯೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೂಲಗಳ ಪ್ರಕಾರ ನಿನ್ನೆಯೂ ಸಿನಿಮಾ 1 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಬಿಡುಗಡೆಯಾಗಿ ಮೂರು ವಾರ ಕಳೆದರೂ ಸ್ಟಾರ್ ಸಿನಿಮಾಗಳ ನಡುವೆ ಸು ಫ್ರಮ್ ಸೋ ಸಿನಿಮಾ ಇಷ್ಟು ಗಳಿಕೆ ಮಾಡಿದ್ದು ದೊಡ್ಡ ಸಾಧನೆಯೇ ಸರಿ.
ಇದೀಗ ಸು ಫ್ರಮ್ ಸೋ ಸಿನಿಮಾ ಗಳಿಕೆ 96 ಕೋಟಿ ರೂ.ಗೆ ಬಂದು ನಿಂತಿದ್ದು ಈ ವಾರಂತ್ಯದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ. ಕೇವಲ 5 ಕೋಟಿ ರೂ. ಬಜೆಟ್ ನಲ್ಲಿ ತಯಾರಾದ ಸಿನಿಮಾ 100 ಕೋಟಿ ರೂ. ಕ್ಲಬ್ ಗೆ ಸೇರ್ಪಡೆಯಾಗುತ್ತಿರುವುದು ದಾಖಲೆಯೇ ಸರಿ.