ರಾಜ್ಯ ರಾಜಕೀಯ ದಲ್ಲಿ ಬಾರೀ ಸಂಚಲನ ಮೂಡಿಸಿದ್ದ ನಟ ಸುದೀಪ್ ಬಿಜೆಪಿಗೆ ಸೇರ್ತಾರೆ ಅನ್ನೋ ಕುತೂಹಲಕ್ಕೆ ಪುಲ್ ಸ್ಟಾಪ್ ಯಿಟ್ಟಿದ್ದಾರೆ. ನಾನು ಯಾವುದೇ ಪಕ್ಷಕ್ಕೆ ಸೇರುತ್ತಿಲ್ಲ. ಯಾರು ನನ್ನ ಜೀವನದಲ್ಲಿ ನನ್ನ ಕಷ್ಟಕ್ಕೆ ಸಹಾಯ ಮಾಡಿದ್ರೋ ಅಂತವರ ಪರ ನಾನು ಕೆಲಸ ಮಾಡುತ್ತೇನೆ.ಅದನ್ನ ಹೊರೆತು ಪಡಿಸಿದ್ರೆ ಬೇರೆ ಯಾವುದೇ ಉದ್ದೇಶವಿಲ್ಲ ಅಂದು ಸ್ಪಷ್ಟ ಪಡಿಸಿದ್ರು. ಸಿಎಂ ಬಸವರಾಜ್ ಬೊಮ್ಮಯಿ ಅವರು ನಮಗೆ ಫ್ಯಾಮಿಲಿ ಪರಿಚಯ ಹಾಗಾಗಿ ಅವರ ಪರವಾಗಿ ಕೆಲಸ ಮಾಡುತ್ತೇನೆ ಅಷ್ಟೇ ಅದನ್ನು ಬಿಟ್ರೆ ಬೇರೆ ಏನು ಇಲ್ಲ.ಅಂದ್ರು ಇನ್ನೂ ಸುದೀಪ್ ಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಮಾತನಾಡಿ ನನ್ನ ಮನೆ ವಿಳಾಸ ಎಲ್ಲರಿಗೂ ಗೊತ್ತಿದೆ ಹಾಗಾಗಿ ಕಳ್ಸಿದ್ದಾರೆ. ಯಾರು ಮಾಡಿದ್ದಾರೇ ಅನ್ನೋದು ನನಗೆ ಗೊತ್ತು.ಇದು ಸಿನಿಮಾರಂಗದಿಂದ ಲೇ ಆಗಿರೋದು ಆದಷ್ಟು ಬೇಗ ಇದರ ರೂವಾರಿ ಗಳು ಯಾರು ಅಂತ ಗೊತ್ತಾಗುತ್ತೆ .ಪೊಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ ಕಾನೂನು ಪ್ರಕಾರ ತನಿಖೆ ಆಗಲಿ ಎಂದ್ರು.ಈಬಗ್ಗೆ ಸುದೀಪ್ ಮ್ಯಾನೇಜರ್ ಜಾಕ್ ಮಂಜು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದು ಈ ತನಿಖೆ ಮುಂದುವರಿಸಿದ್ದಾರೆ. 506.504 120 b ಅಡಿಯಲ್ಲಿ ಪ್ರಕರಣಗಳು ದಾಖಲಾಗಿದೆ